ಅನುದಿನ‌ ಕವನ-೭೦೭, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕಾವ್ಯ ಪ್ರಕಾರ: ತನಗಗಳು

ತನಗಗಳು

ಬಾ ಸಖಿಯೆ ಬಾಳಿಗೆ
ಒಲವಿನ ಜೇನಾಗಿ..!
ಹರಿಯುತಿರೆ ಪ್ರೀತಿ
ದರ್ಪಣ ಬಿಂಬವಾಗಿ..!!

ಬಿಂದಿಗೆಯ ನೀರಾಗಿ
ಒಡಲನ್ನು ತಣಿಸು..!
ನಂದದ ದೀಪವಾಗಿ
ಬೆಳಕನ್ನು ಹರಿಸು..!!

ಜೀವನದ ಕನಸು
ನಿನ್ನಿಂದ ಈಡೇರಲಿ..!
ಹೊಸಬಾಳ ಹಾದಿಯು
ಮುನ್ನುಡಿ ಬರೆಸಲಿ..!!

ಕಲ್ಯಾಣ ಮಂಟಪದಿ
ಕೈಹಿಡಿದ ತರುಣಿ..!
ಹೊಳೆವ ಕಂಗಳಿನ
ಸಚ್ಚಿತ್ರದ ಹರಿಣಿ..!!

-ಶಂಕರಾನಂದ ಹೆಬ್ಬಾಳ, ಇಳಕಲ್ಲು
*****

Leave a Reply

Your email address will not be published. Required fields are marked *