ಅನುದಿನ ಕವನ-೭೪೦, ಕವಿ:ಡಾ.ಸತ್ಯಮಂಗಲ‌ ಮಹಾದೇವ, ಬೆಂಗಳೂರು, ಕವನದ ಶೀರ್ಷಿಕೆ:ಪ್ರಾರ್ಥನೆ🙏

ಪ್ರಾರ್ಥನೆ

ಎದೆಗೊದ್ದ ಪದ್ಮದಳಗಳೇ
ನಿಮ್ಮ ಪಾದಗಳ ಮೃದು ಕಠೋರತೆಗೆ
ಶಿರಬಾಗಿ ನಮಿಸುವೆ

ಹೃದಯಕ್ಕೆ ಕುಟುಕಿದ ಕಾರ್ಕೋಟಕಗಳೇ
ನಿಮ್ಮ ವಿಷವನಿಕ್ಕುವ ಅಮೃತಪಾನದ
ಮಾರ್ಮಿಕ ಮಾತುಗಳಿಗೆ
ಒಲವಿನಿಂದ ಬೆಸಗೊಳ್ಳುವೆ

ಕಣ್ಣು ಕೋರೈಸುವ ಕಸವರದ ಖಡ್ಗಗಳೇ
ಬೆನ್ನ ಹಿಂದೆ ಇರಿದು ಸತ್ಯವ ಉದ್ಧರಿಸಿದ
ಮೊನಚಾದ ಮಾರ್ಮಿಕ ಕರ್ತವ್ಯಕ್ಕೆ
ಶಿರಸಾಷ್ಠಾಂಗ ವಂದಿಸುವೆ

ಹೂವು ಅರಳುವುದು ಸೂರ್ಯನಿಂದ
ಹೊಸಕಿ ಬಾಡಿಸಬಹುದು
ಈ ಜಗದ ನರರಿಂದ ನುಡಿಸಲಾಗದು
ಎಂಬುದು ಸತ್ಯ


– ಡಾ.ಸತ್ಯಮಂಗಲ ಮಹಾದೇವ, ಬೆಂಗಳೂರು
*****

Leave a Reply

Your email address will not be published. Required fields are marked *