ಬಳ್ಳಾರಿ: ಎಕ್ಸೆಲ್ ಅಕಾಡೆಮಿಕ್ಸ್ ನಿಂದ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸಮಾಲೋಚನಾ ಸಭೆ

ಬಳ್ಳಾರಿ, ಮೇ 24: ಬೆಂಗಳೂರಿನ ಎಕ್ಸೆಲ್ ಅಕಾಡೆಮಿಕ್ಸ್ ಸಂಸ್ಥೆ ನಗರದ ರಾಘವ ಕಲಾ‌ಮಂದಿರದಲ್ಲಿ ಬುಧವಾರ ಪಿಯುಸಿ ಉತ್ತೀರ್ಣರಾದ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಸಮಾಲೋಚನಾ ಸಭೆ ಆಯೋಜಿಸಿತ್ತು.
ಸಭೆಯಲ್ಲಿ ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಸಿಇಟಿ, ನೀಟ್, ಜೆಇಇ, ಕೆ-ಸೆಟ್ ಬಗ್ಗೆ ಮಾಹಿತಿ ಪಡೆದುಕೊಂಡರು.


ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮೀಸಲಾತಿ ಪ್ರಮಾಣ, ವಿವಿಧ ಕೋರ್ಸ್ ಗಳ ಆಯ್ಕೆ, ಆನ್‌ಲೈನ್ ಮೂಲಕ ದಾಖಲಾತಿ ಪ್ರವೇಶ ಪ್ರಕ್ರಿಯೆ ಮತ್ತಿತರ ಮಹತ್ವದ ವಿಷಯಗಳನ್ನು ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು.
ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಮುರಳೀಧರ ಮತ್ತು ವಿ ವಿ ವರಪ್ರಸಾದ್ ಅವರು ಉಪನ್ಯಾಸ ‌ನೀಡಿದರು.

*****

Leave a Reply

Your email address will not be published. Required fields are marked *