ಹೆಚ್ಚು ಮಳೆ ಸಂಭವ: ಗುರುವಾರ(ಜು.27) ಬಳ್ಳಾರಿ ಜಿಲ್ಲೆಯ ಅಂಗನವಾಡಿ, ಶಾಲೆಗಳಿಗೆ ರಜೆ -ಡಿಸಿ ಮಿಶ್ರ ಆದೇಶ

ಬಳ್ಳಾರಿ, ಜು.26: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜು.27 ರಂದು ಗುರುವಾರ ಹೆಚ್ಚು ಮಳೆ ಬರುವ ಸಂಭವದ ಹಿನ್ನಲೆಯಲ್ಲಿ ಒಂದು ದಿನ ಜಿಲ್ಲೆಯಾದ್ಯಂತ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರ ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ, ಸರಕಾರಿ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ತಮಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಮಿಶ್ರ ಅವರು ರಜೆ ಘೋಷಿಸಿದ್ದಾರೆ.
ರಜೆ ಘೋಷಣೆ ಹಿನ್ನಲೆಯಲ್ಲಿ ಕಲಿಕಾ ಸಮಯವನ್ನು ಶನಿವಾರ ಅಥವಾ ಭಾನುವಾರ ದಿನದಂದು ಹೆಚ್ಚುವರಿ ತರಗತಿಗಳನ್ನು ನಡೆಸಿ ಪಠ್ಯಕ್ರಮವನ್ನು ಸಮತೋಲನಗೊಳಿಸಲು ಸೂಚಿಸಿದ್ದಾರೆ.
ಕಾಲೇಜಿಗೆ ಇಲ್ಲ ರಜೆ: ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಕಾಲೇಜುಗಳಿಗೆ ರಜೆ ಇರುವುದಿಲ್ಲ, ಎಂದಿನಂತೆ ತರಗತಿಗಳು ನಡೆಯುತ್ತವೆ
ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
—–

Leave a Reply

Your email address will not be published. Required fields are marked *