ಕಲೆಗಳ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದಾಗ ಮಾತ್ರ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯ -ಡಾ. ರಾಜು ಜಡಾರ್

ಬಳ್ಳಾರಿ, ಮೇ 26:   ಕಲೆಗಳ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದಾಗ ಮಾತ್ರ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾದ್ಯ ಎಂದು ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಸಚಿವರು ಡಾ. ರಾಜು ಜಡಾರ್ ತಿಳಿಸಿದರು. ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರ ದೊಂದಿಗೆ ಸೋಮವಾರ ರಾತ್ರಿ ಹೊಂಗಿರಣ ರಂಗ ಮಂದಿರದಲ್ಲಿ ಹಮ್ಮಿಕೊಂಡ ತುಂಗಾ ಅಧಿಕಮಾಸ ಸಾಂಸ್ಕ್ರತಿಕ ವೈಭವ 2026 ಕಾರ್ಯಕ್ರಮವನ್ನು ವಾದ್ಯಬಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ, ನಾಡಿನ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಮ್ಮೆಲ್ಲರದು ಎಂದು ಅವರು ಅಭಿಪ್ರಾಯಪಟ್ಟರು.                                              ಹಿರಿಯ ರಂಗ ಕಲಾವಿದ ಎಂ.ರಾಮಂಜಿನೇಯುಲು ಕಲೆಗಳ ಉಳಿವಿಗೆ ಉದಯೋನ್ಮುಖ ಕಲಾವಿದರನ್ನು ಬೆಳಿಸಲು ಈ ಸಂಸ್ಥೆ ಮಾಡುತ್ತಿರುವ ಸೇವೆಯನ್ನೂ ಸ್ಮರಿಸಿದರು.        ಕರ್ನಾಟಕ ಕ್ರಿಯಾಶೀಲ ಶಿಕ್ಷಕರ ವೇದಿಕೆ ಜಿಲ್ಲಾ ಅಧ್ಯಕ್ಷರು ರವಿ ಚೆಳಗುರ್ಕಿ ಮಾತನಾಡಿ ಕಳೆದ ಹನ್ನೆರಡು ವರ್ಷದಿಂದ ತುಂಗ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ಕಲೆಗಳಿಗೆ, ಕಲಾ ಪ್ರದರ್ಶನಕ್ಕೆ ನೀಡುತ್ತಿರುವ ಪ್ರೋತ್ಸಾಹ ಅಭಿನಂದನೀಯ ಎಂದು ಮೆಚ್ರುಚುಗೆ ವ್ಯಕ್ತಪಡಿಸಿದರು.                                    ಕಲೆಗಳ ಪ್ರದರ್ಶನಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಇದೆ ಎಂದು ಹವ್ಯಾಸಿ ಕಲಾವಿದರ ಒಕ್ಕೂಟ ಜಿಲ್ಲಾ ಸಂಚಾಲಕರು ಜಿ. ಎಂ.ಚಂದ್ರಶೇಖರಯ್ಯ ಸ್ವಾಮಿ ಅವರು ನುಡಿದರು.            ಅತಿಥಿ ಗಣ್ಯರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.                 ಬಳಿಕ ಶ್ರೀಜ. ಜೆ ತಂಡ ದಿಂದ ಪ್ರದರ್ಶಿಸಿದ ಸಮೂಹ ನೃತ್ಯ, ನಾಗರಾಜು ಅಮರಪುರ ತಂಡ ದಿಂದ ಯಾರಿಗೆ ಬೇಕು ನಿನ್ನ ಕವಿತೆ ಹಾಸ್ಯ ನಾಟಕ ಪ್ರೇಕ್ಷಕರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ವಾಣಿಜ್ಯ ಕೈಗಾರಿಕೆ ಸಂಸ್ಥೆಯ ಹಿರಿಯ ಉಪಾಧ್ಯಕ್ಷರು ದೊಡ್ಡನಗೌಡ, ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ನೇತ್ರಾವತಿ, ರವಿ, ಟಿ.ಶ್ರೀನಿವಾಸ್, ಕಣೇಕಲ್ ಶ್ರೀಧರ, ಶಿವರುದ್ರಯ್ಯ ಸ್ವಾಮಿ, ನಿವೃತ್ತ ಪ್ರಾಂಶುಪಾಲರಾದ ಕುಪ್ಪಗಲ್ ವೀರೇಶ್, ಉಪನ್ಯಾಸಕರಾದ ಮಂಜುನಾಥ್, ಕಲಾವಿದ ಸುಬ್ಬಣ್ಣ, ಆದೋನಿ ವೀಣ, ಶೇಷರೆಡ್ಡಿ, ವೀರೇಶ, ಗುರುಸ್ವಾಮಿ, ಪಂಪಾಪತಿ, ಹುಸೇನಸಾಬ, ಬಸವರಾಜ್ ಸ್ವಾಮಿ, ವೆಂಕಟೇಶಲು, ಮುಂತಾದವರು ಇದ್ದರು.        ರಂಗ ಕಲಾವಿದ ನಾಗಭೂಷಣ್ ನಿರೂಪಿಸಿದರು. ನಾಗರಾಜ್ ಗೌಡ ವಂದಿಸಿದರು.
*****

Leave a Reply

Your email address will not be published. Required fields are marked *