ಹೊಸಪೇಟೆ ತಾಪಂ ಪ್ರಭಾರಿ ಇಓ ಉಮೇಶ್ ಅವರಿಗೆ ಕನಕ ನೌಕರರ ಸಂಘದಿಂದ ಸನ್ಮಾನ

ಹೊಸಪೇಟೆ : ಇಲ್ಲಿನ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಜಿ.ವಿ.ರಮೇಶ ಅವರು ಬಾಗೇಪಲ್ಲಿಗೆ ವರ್ಗಾವಣೆಯಾಗಿದ್ದರಿಂದ ತೆರವಾದ ಸ್ಥಾನಕ್ಕೆ ಪ್ರಭಾರಿಯಾಗಿ ಎಂ.ಉಮೇಶ ಇವರನ್ನು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಜಿ.ಪಂ.ಸಿ.ಇ.ಒ ಸದಾಶಿವ ಪ್ರಭು ನಿಯೋಜಿಸಿ ಆದೇಶಿಸಿದ್ದಾರೆ.                                        ಎಂ.ಉಮೇಶ ಅವರು ಈ ಹಿಂದೆ ತಾ.ಪಂ.ಯಲ್ಲಿ ಸಹಾಯಕ ನಿರ್ದೇಶಕರಾಗಿ, ಜಿ.ಪಂ.ಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ತಾ.ಪಂ.ಗೆ ಪ್ರಭಾರಿಯಾಗಿ ನಿಯೋಜನೆಗೊಂಡಿರುವ ಎಂ.ಉಮೇಶ ಇವರನ್ನು ಗುರುವಾರ ಕನಕ ನೌಕರರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಕಾಕುಬಾಳು ಬತ್ತಿ ತಿಮ್ಮಪ್ಪ, ಕಾರ್ಯಾಧ್ಯಕ್ಷ ಮಲ್ಲಯ್ಯ, ಉಪಾಧ್ಯಕ್ಷರಾದ ಕ್ಯಾದಿಗಿಹಾಳ್ ಉದೇದಪ್ಪ, ತಾಲೂಕು ಅದ್ಯಕ್ಷ ಟಿ.ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಬಿ.ಮಲ್ಲಿಕಾರ್ಜುನ, ತಾಲೂಕು ಉಪಾಧ್ಯಕ್ಷೆ ಶ್ಯಾಮಲಾ, ಸಹ ಕಾರ್ಯದರ್ಶಿ ಮಂಜಪ್ಪ, ತಾಯಪ್ಪ, ನಾಗಭೂಷಣ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *