ಬೆಂವಿವಿ ವತಿಯಿಂದ “ಸಂವಿಧಾನ ಪೀಠಿಕೆ ಓದುವ” ಕಾರ್ಯಕ್ರಮ ಆಯೋಜನೆ -ಕುಲಸಚಿವ ಶೇಕ್ ಲತೀಫ್

ಬೆಂಗಳೂರು, ಸೆ. 15: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ “ಸಂವಿಧಾನ ಪೀಠಿಕೆ ಓದು” ಕಾರ್ಯಕ್ರಮವನ್ನು ಮೊದಲಬಾರಿಗೆ  ಸಾರ್ವತ್ರೀಕರಿಸಿರುವುದರಿಂದ ಬೆಂಗಳೂರು ವಿಶ್ವವಿದ್ಯಾಲಯವು ಜ್ಞಾನಭಾರತಿ ಆವರಣದ ಆಡಳಿತ ಕಛೇರಿ ಮುಂಭಾಗದಲ್ಲಿ  ಶುಕ್ರವಾರ ಬೆಳಗ್ಗೆ 11.30ಕ್ಕೆ ಆಯೋಜಿಸಿದೆ‌.                              ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು (ಆಡಳಿತ), ಕುಲಸಚಿವರು (ಮೌಲ್ಯಮಾಪನ) ಹಣಕಾಸು ಅಧಿಕಾರಿ ಭಾಗವಹಿಸುವರು.

 

 

 

ಎಲ್ಲಾ ವಿಭಾಗಗಳ ಮುಖ್ಯಸ್ಥರು, ನಿರ್ದೇಶಕರು, ಸಮನ್ವಯಾಧಿಕಾರಿಗಳು,ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವರ್ಗದವರು, ಸಂಶೋಧನಾ ಮತ್ತು
ಸ್ನಾತಕೋತ್ತರ ವಿದ್ಯಾರ್ಥಿಗಳು, ಮತ್ತಿತರರು ಭಾಗವಹಿಸಬೇಕೆಂದು ವಿವಿಯ ಕುಲಸಚಿವರಾದ ಶೇಕ್ ಲತೀಫ್ ಅವರು  ತಿಳಿಸಿದ್ದಾರೆ.

Leave a Reply

Your email address will not be published. Required fields are marked *