ಅನುದಿನ ಕವನ-೯೮೭, ಕವಿ: ಮನಂ, ಬೆಂಗಳೂರು,

ಸೌಂದರ್ಯದ ಹಿಂದಿನ ಕುರೂಪ
ಸೌಂದರ್ಯದ ಪ್ರತಿಬಿಂಬದ ಕುರೂಪ
ಸೌಂದರ್ಯದ ನೆರಳಿನ ಕುರೂಪ
ಸೌಂದರ್ಯ ಹುಟ್ಟಿದಪರಿಯ ಕುರೂಪ
ಸೌಂದರ್ಯ ಬೀರುವ ಕರಾಳತೆ
ಸೌಂದರ್ಯ ತೋರುವ ದುರುಳತೆ
ಸೌಂದರ್ಯ ಸೋರುವ ಮರುಳತೆ
ಸೌಂದರ್ಯ ಮೀರುವ ಚಾರಿತ್ರ್ಯ
ಕಂಡು ಕಂಡೂ ಸೌಂದರ್ಯವ
ಆರಾಧಿಸಲದೇನಿದೆ?
ಚಾರಿತ್ರ್ಯ ತಂದಿಟ್ಟ ಸಮಾಧಾನವ
ಚಾರಿತ್ರ್ಯ ಕೊಟ್ಟ ಶಾಂತಿಯ
ಚಾರಿತ್ರ್ಯ ತೋರುವ ಸತ್ಯವ
ಅನುಭವಿಸಿದೊಡೆ
ಮಾಳವಾನಂದ ನಿಜಲಿಂಗಾಧಿಪತಿ

-ಮನಂ, ಬೆಂಗಳೂರು
—–

Leave a Reply

Your email address will not be published. Required fields are marked *