ಹಲಕುಂದಿ ಸಕಿಪ್ರಾ ಶಾಲೆಯಲ್ಲಿ(ವಿಬಿಎಸ್ ಮಠ) ಅರ್ಥಪೂರ್ಣ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಬಳ್ಳಾರಿ, ಸೆ.15: ತಾಲೂಕಿನ ಹಲಕುಂದಿ ಗ್ರಾಮದ ಸರಕಾರಿ‌ ಕಿರಿಯ ಪ್ರಾಥಮಿಕ ಶಾಲೆ(ವಿಬಿಎಸ್ ಮಠ)ಯಲ್ಲಿ ಶುಕ್ರವಾರ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಿದರು.
ಹಿರಿಯ ಶಿಕ್ಷಕಿ ಮೀನಾಕ್ಷಿ ಕಾಳೆ ಅವರ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಜಯಲಕ್ಷ್ಮಿ ಅವರು ಸಂವಿಧಾನ‌ ಪೀಠಿಕೆಯನ್ನು ಭೋದಿಸಿದರು. ಮತ್ತೋರ್ವ ಸಹ ಶಕ್ಷಕಿ  ವಿಶಾಲಾಕ್ಷಿ ಅವರು ಸಂವಿಧಾನ ಮತ್ತು  ಪೀಠಿಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅತಿಥಿ ಶಿಕ್ಷಕಿ ದೇವಿ, ಅಡುಗೆ ಸಹಾಯಕಿ ಹೇಮಾವತಿ, ವಿದ್ಯಾರ್ಥಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
—–

Leave a Reply

Your email address will not be published. Required fields are marked *