ಅನುದಿನ ಕವನ-೧೧೦೧, ಕವಿಯಿತ್ರಿ: ಮಮತಾ‌ ಅರಸೀಕೆರೆ, ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ

1. ನೀನು ಭೇಟಿಯಾಗುವ

ಮುಂಚಿನ ಮಾಗಿ ಕಾಲವು
ಅದ್ಹೇಗೆ ಸರಿಯುತ್ತಿತ್ತೆಂದು
ನೆನೆದರೆ  ಅಚ್ಚರಿ ನನಗೆ

ನಿನ್ನ ನೆನಪೇ ಈಗ ಸಂಜೆಗಳನ್ನು
ರಮ್ಯವಾಗಿಸಲು ಕಲಿಸುವ
ಬೆಚ್ಚನೆ ಸಾಮಿಪ್ಯ

2. ಮಾಗಿಯ ಸಂಜೆಗಳು
ನೀರಸ ಅನುಭವ ದಾಖಲಿಸಲು
ನಿರಾಕರಿಸತೊಡಗಿದವು

ನೀನೀಗ ಗಾಢ ಚಳಿಯಲ್ಲಿನ
ಕುಳಿರ್ಗಾಳಿಗೆ  ಬೆಚ್ಚನೆಯ
ಹೊದಿಕೆ ಹೊದಿಸುವ ಮಾಂತ್ರಿಕ

-ಮಮತಾ ಅರಸೀಕೆರೆ
—–

Leave a Reply

Your email address will not be published. Required fields are marked *