ಮೈಸೂರು, ಅ.5: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ನೀಡುವ ಪ್ರತಿಷ್ಠಿತ ‘ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ-2025’ಕ್ಕೆ ಹಿರಿಯ ಕೃಷಿ ಸಾಹಿತಿ ಡಾ. ಅಮ್ಮಸಂದ್ರ ಸುರೇಶ್ ಅವರ ‘ಕೃಷಿ –ಖುಷಿ’ ಕೃತಿ ಆಯ್ಕೆಯಾಗಿದೆ.

ಆಧುನಿಕ ಕೃಷಿ ತಂತ್ರಜ್ಞಾನದ ಮೂಲಕ ರೈತರ ಸ್ವಾವಲಂಬನೆ ಸೇರಿದಂತೆ ವಿವಿಧ ಕೃಷಿ ಅಂಕಣಗಳ ಸಂಗ್ರಹವಾಗಿರುವ ‘ಕೃಷಿ-ಖುಷಿ’ ಕೃತಿಯು ಕನ್ನಡದ ಕೃಷಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆ ಎಂದು ಪರಿಗಣಸಿ ವಿಶ್ವವಿದ್ಯಾನಿಲಯ ಆಯ್ಕೆ ಸಮಿತಿಯು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಸ್ತುತ ಸುರೇಶ್ ಅವರು ಮೈಸೂರು ಅಂಚೆ ವಿಭಾಗದಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಬಳ್ಳಾರಿ
ಡಾ. ಸುರೇಶ್ ಅವರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಳ್ಳಾರಿಯ ಸಿ. ಮಂಜುನಾಥ ಸೇರಿದಂತೆ ನಾಡಿನ ಹಲವು ರೈತಪರ ಸಂಘಟನೆಗಳು ಮತ್ತು ಸಾಹಿತ್ಯ ವಲಯದ ಗಣ್ಯರು ಅಭಿನಂದಿಸಿದ್ದಾರೆ.
