ಅನುದಿನ ಕವನ-೧೨೯೪, ಕವಿ: ವೈ ಜಿ ಅಶೋಕ್ ಕುಮಾರ್, ಬೆಂಗಳೂರು

ಅಕ್ಷರಗಳು ಒಣಗುವುದಿಲ್ಲ
ಹೃದಯ ಹೊಕ್ಕು
ಹೊರಬಂದ ಅಕ್ಷರಗಳು ಒಂದೊಂದು ಮೆಟ್ಟಿಲುಗಳಲ್ಲೂ ಕಾದು ಕುಳಿತಿರುತ್ತವೆ

ಅಕ್ಷರಗಳನ್ನು ಸಹನೆಯಿಂದ ನೇವರಿಸಿ ಅವು ನಮ್ಮೊಳಗೇ ಮರಿ ಮಾಡುತ್ತವೆ
ಅಕ್ಷರಗಳು ನಮ್ಮ ರುಚಿಗೆ ಈಡಾಗಿ ತುಳಿಸಿಕೊಂಡರೆ
ಬೀದಿಗೆ ಬೀಳುತ್ತವೆ

ಅಕ್ಷರಗಳು ಇತರರ
ನಾಲಿಗೆಯಲ್ಲಿ ವರ್ಣಪಡೆದು ಬಹುರೂಪಿಯಾಗುತ್ತವೆ

ಅಕ್ಷರಗಳು
ಹಸಿಯಾಗಿ
ನಮ್ಮೊಳಗೆ ಇರಲಿ
ಅವು ಬೀದಿಗೆ
ಬೀಳದಿರಲಿ

ಬೀದಿಯ ಅಪರಿಚಿತರು ಅಕ್ಷರಗಳ ತುಳಿಯುತ್ತಲೇ ಇರುತ್ತಾರೆ…

-ವೈ ಜಿ ಅಶೋಕ್ ಕುಮಾರ್, ಬೆಂಗಳೂರು

Leave a Reply

Your email address will not be published. Required fields are marked *