ಯುವ ಮುಖಂಡ ಜೆ ಎಸ್ ಶ್ರೀನಿವಾಸುಲುಗೆ ಧಮ್ಮಸೇವಾರತ್ನ ಪ್ರಶಸ್ತಿ ಪ್ರದಾನ

ಬಳ್ಳಾರಿ,‌ನ.2: ನಗರದ ಯುವ ಮುಖಂಡ, ಭೀಮವಾದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಜೆ ಎಸ್ ಶ್ರೀನಿವಾಸುಲು ಅವರಿಗೆ ಧಮ್ಮಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೈಸೂರಿನ ತನುಮನ ಸಂಸ್ಥೆ ಆಯೋಜಿಸಿದ್ದ 68ನೇ ಧಮ್ಮದೀಕ್ಷಾ ವರ್ಷಾಚರಣೆ ಅಂಗವಾಗಿ ಧಮ್ಮ ಸಂಗೀತೋತ್ಸವ ಮತ್ತು ರಾಜ್ಯ ಮಟ್ಟದ ಧಮ್ಮಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ‌
ಮೈಸೂರು ಎ.ಪಿ.ಎಂ.ಸಿ ಮಾಜಿ ಉಪಾಧ್ಯಕ್ಷರು ಮತ್ತು ಕಲಾಪೋಷಕರಾದ ಚಿಕ್ಕಜವರಪ್ಪ ಅವರು ರಾಜ್ಯದ 31 ಜಿಲ್ಲೆಗಳಿಂದ ಆಗಮಿಸಿದ್ದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು.
ಸಮಾರಂಭದಲ್ಲಿ ಮೈಸೂರು ಜಿಲ್ಲೆಯ ಶಾಸಕರು, ತನುಮನ ಸಂಸ್ಥೆಯ ಪದಾಧಿಕಾರಿಗಳು, ವಿವಿಧ‌ ಸಂಘ ಸಂಸ್ಥೆಗಳ ಗಣ್ಯರು ಪಾಲ್ಗೊಂಡಿದ್ದರು.
——

Leave a Reply

Your email address will not be published. Required fields are marked *