
ಹರಿಹರ: ರಾಷ್ಟೀಯ ಸೇವಾ ಯೋಜನೆಯಂತಹ ಚಟುವಟಿಕೆಗಳಿಂದ ಸ್ವಯಂ ಶಿಸ್ತು ಕಲಿಕೆ ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ-೧ ಮತ್ತು ೨ ರ ವತಿಯಿಂದ ತಾಲೂಕಿನ ಸಾಲಕಟ್ಟೆ ಗ್ರಾಮದಲ್ಲಿ ೭ ದಿನಗಳ ಕಾಲ ಜರುಗಿದ ‘ವಿಕಸಿತ ಭಾರತದೆಡೆಗೆ ಯುವಜನತೆ’ ಎಂಬ ಧ್ಯೇಯದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉತ್ರಮ ಭವಿಷ್ಯದ ಜೀವನ ರೂಪಿಸಿಕೊಳ್ಳಲು, ಔದ್ಯೋಗಿಕ ಬೆಳವಣಿಗೆಗೆ ಎನ್‌ಎಸ್‌ಎಸ್‌ನ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಹೇಳಿದರು. ಸ್ವಚ್ಚತೆಗೆ ಅಧ್ಯತೆ ನೀಡಿ, ಸೇವಾ ಮನೋಭಾವವನ್ನು ಯುವಜನತೆ ಹೊಂದಬೇಕು ಎಂದು ಆಶಯ ವ್ಯಕ್ತಪಡಿಸಿ, ೭ ದಿನಗಳ ಕಾಲ ಶಿಬಿರದ ಸಮಯದಲ್ಲಿ ಸಹಕಾರ ನೀಡಿದ ಗ್ರಾಮದ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದರು.

ತಾಲೂಕಿನ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷರಾದ ಆರ್.ಆರ್.ಮಠ ಅವರು ಮಾತನಾಡಿ, ಶಿಕ್ಷಣಕ್ಕೆ ಅಧ್ಯತೆ ನೀಡುವ ಸಮಾಜ ಸ್ವಯಂ ಅಭಿವೃದ್ಧಿ ಆಗುತ್ತದೆ. ಉನ್ನತ ಶಿಕ್ಷಣ ಹೊಂದಿದ ಯುವಜನರು ಮಕ್ಕಳಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಹೇಳಿ, ಮನವೊಲಿಸಲು ಮನವಿ ಮಾಡಿದರು. ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ಹಿನ್ನೆಲೆಯಲ್ಲಿ ಸರ್ಕಾರ ನೀಡುವ ಪೌಷ್ಠಿಕ ಆಹಾರ, ಸಮವಸ್ತç, ಪಾದರಕ್ಷೆ, ಪಠ್ಯ ಪುಸ್ತಕ, ಪಠ್ಯೇತರ ಚಟುವಟಿಕೆಗಳ ಸಮಾಗ್ರಿಗಳು ಹಾಗೂ ಇನ್ನಿತರ ಸೌಲಭ್ಯಗಳನ್ನು ವಿವರಿಸಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ತಿಪ್ಪೇಸ್ವಾಮಿ.ಹೆಚ್ ಅವರು ಸಮಾರೋಪ ಭಾಷಣ ಮಾಡಿದರು. ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಅನಂತನಾಗ್.ಹೆಚ್.ಪಿ, ಮುಖ್ಯೋಪಾಧ್ಯಯರಾದ ಡಿ.ಎಂ.ಮಂಜುನಾಥ್, ಶಿಕ್ಷಕರುಗಳಾದ ಆರ್.ಬಿ.ಮಲ್ಲಿಕಾರ್ಜುನ, ಮಹಾಂತೇಶ್.ಡಿ.ಎನ್, ಎಫ್.ಸಿ.ಐ ನೌಕರರಾದ ಪರಶುರಾಮ್, ಕೆ.ಎನ್.ದೇವರಾಜ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಯೋಗೇಶ್.ಕೆ.ಜೆ, ಹನುಮಂತಪ್ಪ.ಕೆ.ವೈ, ಇತಿಹಾಸ ವಿಭಾಗದ ಉಪನ್ಯಾಸಕರಾದ ರಾಜಪ್ಪ.ಎ ಅವರುಗಳು ಉಪಸ್ಥಿತರಿದ್ದು ಮಾತನಾಡಿದರು.

