ಅನುದಿನ ಕವನ-೧೪೮೮, ಕವಯಿತ್ರಿ: ಡಾ.ಭಾರತಿ ಅಶೋಕ್, ಹೊಸಪೇಟೆ

ಸದಾ
ಒಳಗನ್ನೇ ಧ್ಯಾನಿಸುವ ನನಗೆ
ನಿನ್ಹೊರಗನ್ನು ಕುರಿತು
ಹೇಳೆಂದರೆ ಏನು ತಾನೆ ಹೇಳಿಲಿ

ಹೊರಗನ್ನು ಪ್ರೀತಿಸುವವನಿಗೆ
ಒಳಗೆಂದರೆ ಬಂಧನ
ನನಗದೇ ಬಯಲು

ಸದಾ ಬಯಲಾಗುವ ನನಗೆ
ನಿನ್ನದು ಬಂಧನ
ನನಗೆ ಬಯಲು

ನಿನ್ನ ಬಯಲ ಬಂಧನ
ನನ್ನ ಘಾಸಿಗೊಳಿಸಲು
ಮತ್ತದೇ ಬಂಧನದ(ಬಯಲ) ಮೊರೆ ಹೋಗುವೆ


-ಡಾ. ಭಾರತಿ ಅಶೋಕ್, ಹೊಸಪೇಟೆ
—–

Leave a Reply

Your email address will not be published. Required fields are marked *