Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಕೃಷ್ಣ ಸನ್ನಿಧಿಯಲ್ಲಿ ನಾದ ನಿನಾದ: ಬಳ್ಳಾರಿ‌ ಜಿಲ್ಲೆ ಅತ್ಯದ್ಭುತ ಪ್ರತಿಭೆಗಳ ಸಂಗಮ -ಸಿ.ಚನ್ನಬಸವಣ್ಣ - Karnataka Kahale

ಕೃಷ್ಣ ಸನ್ನಿಧಿಯಲ್ಲಿ ನಾದ ನಿನಾದ: ಬಳ್ಳಾರಿ‌ ಜಿಲ್ಲೆ ಅತ್ಯದ್ಭುತ ಪ್ರತಿಭೆಗಳ ಸಂಗಮ -ಸಿ.ಚನ್ನಬಸವಣ್ಣ

ಬಳ್ಳಾರಿ, ಜ.27: ಬಳ್ಳಾರಿ ಜಿಲ್ಲೆಯಲ್ಲಿ ಅತ್ಯದ್ಭುತ ಪ್ರತಿಭೆಗಳಿದ್ದು ತಮ್ಮ ಸಾಧನೆಗಳ‌ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ ಎಂದು ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಅವರು ಹೇಳಿದರು.
ಹಳೇ ದರೋಜಿಯ ನಾಡೋಜ ಬರ‍್ರಕಥಾ ಈರಮ್ಮ ಫೌಂಡೇಷನ್ ಮತ್ತು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವಿಶೇಷ ಘಟಕ ಯೋಜನೆಯಡಿಯಲ್ಲಿ  ಭಾನುವಾರ ಸಮೀಪದ ಸಂಗನಕಲ್ಲು ಗ್ರಾಮದ‌‌
ಕೃಷ್ಣ ಸನ್ನಿಧಿಯಲ್ಲಿ ಆಯೋಜಿಸಿದ್ದ ನಾದ ನಿನಾದ( ಸಂಗೀತ ಸಂಭ್ರಮ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಪ್ರತಿಭೆ ಸೃಷ್ಟಿ, ರಾಜ್ಯೋತವ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ, ಗಾಯಕ ದೊಡ್ಡ ಬಸವ ಗವಾಯಿ
ಸೇರಿದಂತೆ ಹಲವರು ತಮ್ಮ‌ ಪ್ರತಿಭೆಯಿಂದ‌‌ ಜಿಲ್ಲೆಗೆ ಹೆಸರು ತಂದಿದ್ದಾರೆ ಎಂದು ತಿಳಿಸಿದರು.
ಭಾರತದ ವೈಶಿಷ್ಟ್ಯತೆ ಎಂದರೆ ಭಿನ್ನತೆಯಲ್ಲಿ ಏಕತೆ. ದೇಶವಾಗಿದ್ದರೂ ಹಲವು ರಾಜ್ಯಗಳ ಒಕ್ಕೂಟ. ವಿಭಿನ್ನ ಭಾಷೆ, ಧರ್ಮ, ಸಂಸ್ಕೃತಿ, ಆಚರಣೆಗಳಿದ್ದರೂ ಭಿನ್ನತೆಯಲ್ಲಿ ಏಕತೆಯಿಂದ‌‌ ವಿಶ್ವದ ಗಮನ ಸೆಳೆದಿದೆ ಎಂದು ಶ್ಲಾಘಿಸಿದರು.
ನಿಸರ್ಗದ ‌ಮಡಿಲಲ್ಲಿ  ಇರುವ ಕೃಷ್ಣ ಸನ್ನಿಧಿ ಹಿರಿಯರ ನೆಮ್ಮದಿ ತಾಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಗೀತ‌ ಕಾರ್ಯಕ್ರಮಗಳಲ್ಲಿ ಮಾತು‌ ಸೂತಕ. ಹೀಗಾಗಿ ಸಂಗೀತವನ್ನು ಅಸ್ವಾದಿಸಬೇಕು ಎಂದರು.


ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಸನ್ನಿಧಿಯ ನಿರ್ದೇಶಕಿ ಡಾ. ನಾಗರತ್ನ‌ ಸುಯಜ್ಞ ಅವರು ಮಾತನಾಡಿ, ಕೃಷ್ಣ ಸನ್ನಿಧಿ ಹಿರಿಯರ ಅನಾಥಾಶ್ರಮವಲ್ಲ. ತಮ್ಮ ಸ್ವ ಇಚ್ಚೆಗನುಸಾರವಾಗಿ ಶಾಂತಿಯುತವಾಗಿ ಬದುಕಲು ಪ್ರಯತ್ನಿಸುವ ಮುಸ್ಸಂಜೆಯ   ತಂಗುದಾಣ ಎಂದು ಹೇಳಿದರು.
ಹಿರಿಯರ ದೈಹಿಕ, ಸಾಮಾಜಿಕ, ಮಾನಸಿಕ ಅನಿವಾರ್ಯಗಳಿಗೆ ಸ್ಪಂದಿಸಿರುವುದರಿಂದ ರಾಜ್ಯ ಸರಕಾರ ಕೃಷ್ಣ ಸನ್ನಿಧಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.


ಮುಖ್ಯ ಅತಿಥಿ, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ‌ಮಾತನಾಡಿ, ಉರಿ‌ ಬಿಸಿಲಿನ ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ಅಚ್ಚ ಹಸಿರಿನಿಂದ‌ ಕೂಡಿದ  ನಿಸರ್ಗ ಧಾಮದಲ್ಲಿ ಕೃಷ್ಣ ಸನ್ನಿಧಿಯನ್ನು ನಿರ್ಮಿಸಿ ಹಿರಿಯರಿಗೆ, ಅನಾರೋಗ್ಯ ಪೀಡಿತರಿಗೆ ಆಶ್ರಯ ನೀಡಿರುವ ಡಾ. ನಾಗರತ್ನ ಸುಯಜ್ಞ ಅವರು ಸಮಾಜಕ್ಕ ಮಾದರಿಯಾಗಿದ್ದಾರೆ ಎಂದರು.
ಕುಟುಂಬ ಸದಸ್ಯರ ಸಹಕಾರ, ಬೆಂಬಲದಿಂದ ಮಾತ್ರ ಇಂತಹ ವಿಶೇಷತೆಯನ್ನು ಸಾಧಿಸಲು ಸಾಧ್ಯ ಎಂದು‌ ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಬಿಮ್ಸ್ ವೈದ್ಯ ಡಾ.‌ಸುರೇಶ್ ಚಾಗನೂರು, ರತಿ ಕಪಾಡಿಯಾ, ಡಾ. ಸುಯಜ್ಞ ಜೋ ಷಿ ಮತ್ತಿತರರು ಉಪಸ್ಥಿತರಿದ್ದರು.
ಸಂಗೀತ ಸಂಭ್ರಮ: ಯುವ ಗಾಯಕಿ ಸೃಷ್ಟಿ ಸುರೇಶ್ ಅವರಿಂದ ಭಾವ ಸಂಗೀತ, ರಾಜ್ಯೋತ್ಸವ ಪ್ರಶಸ್ತಿ  ಪುರಸ್ಕೃತ ಅಶ್ವ ರಾಮಣ್ಣ ಅವರಿಂದ ತತ್ವ ಪದ, ದೊಡ್ಡ‌ಬಸವ ಗವಾಯಿ ಅವರಿಂದ ಸುಗಮ‌ ಸಂಗೀತ ಮುದ್ದಟನೂರು ತಿಪ್ಪೇಸ್ವಾಮಿ ಅವರಿಂದ ವಚನ ಸಂಗೀತ, ಕುಡುತಿನಿ ಉಮೇಶ್ ಎಂ‌ ಅವರಿಂದ‌ ದಾಸರ ಪದಗಳ ಗಾಯನ ಹಾಗೂ ಯೋಗೇಶ ಬಣಕಾರ ಅವರ ತಬಲ‌ಝಲಕ್ ನೆರೆದಿದ್ದ‌ ನೂರಾರು ಸಂಗೀತ ಪ್ರಿಯರಿಗೆ ರಸದೌತಣ ನೀಡಿತು.

ಇದೇ ಸಂದರ್ಭದಲ್ಲಿ ಸಿ. ಚೆನ್ನಬಸವಣ್ಣ ‌ಮತ್ತು ಡಾ.‌ನಾಗರತ್ನ ಸುಯಜ್ಞ  ಅವರನ್ನು ಫೌಂಡೇಶನ್ ವತಿಯಿಂದ ಗೌರವಸಲಾಯಿತು.
ಕೃಷ್ಣ ಸನ್ನಿಧಿ ವತಿಯಿಂದ ಗಾಯಕರನ್ನು‌‌ ಸನ್ಮಾನಿಸಲಾಯಿತು.
ಫೌಂಡೇಶನ್ ಅಧ್ಯಕ್ಷ ಡಾ.‌ಅಶ್ವ ರಾಮು, ಸ್ವಾಗತಿಸಿ ಪ್ರಾಸ್ತಾವಿಕವಾಗಿ‌ ಮಾತನಾಡಿದರು. ವಿದ್ಯಾರ್ಥಿನಿ‌ ನಾಗವೇಣಿ‌‌ ನಿರೂಪಿಸಿದರು. ಚೇತನ್ ಕುಮಾರ್ ನಿರ್ವಹಿಸಿದರು. ಆಲ್ತಾಫ್ ಭಾಷ ವಂದಿಸಿದರು.
—–