ಬಳ್ಳಾರಿ, ಜು.11: ವಿಧಾನ ಪರಿಷತ್ತ ಮಾಜಿ ಸಭಾಪತಿ,ಅಖಿಲಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಎನ್ ತಿಪ್ಪಣ್ಣ ಅವರು ಇಂದು ಬೆಳಗಿನ ಜಾವ ಇಹಲೋಕ ತ್ಯಜಸಿದ್ದಾರೆ. ವಯೋಸಹಜ ಖಾಯಿಲೆಯಿಂದ ಕೆಲವು ದಿನಗಳಿಂದ ಬಳಲುತ್ತಿದ್ದರು ಬಳ್ಳಾರಿಯ ನಿವಾಸದಲ್ಲಿ ಇಂದು ಬೆಳಗಿನ ಜಾವ ಸಾವನ್ಬಪ್ಪಿದರು ಅವರಿಗೆ 96 ವರ್ಷ ವಯಸ್ಸಾಗಿತ್ತು
1928 ರಲ್ಲಿ ಚಿತ್ರದುರ್ಗ ಜಿಲ್ಲೆ ತುರುವನೂರಿನಲ್ಲಿ ಜನನ. ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಭಾಗವಹಿಸಿದ್ದರು..2004 ರಲ್ಲಿ ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿದ್ದರು, ಜೆಡಿಎಸ್ ಕಾಂಗ್ರೆಸ್ ಮೊದಲ ಬಾರಿ ಮೈತ್ರಿಯಾಗಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದರು.ಮೂರು ಬಾರಿ ವಿಧಾನಪರಿಷತ್ ಸದ್ಯರಾಗಿದ್ದರು.ಕೆಲಕಾಲ ಸಭಾಪತಿಯಾಗಿದ್ದರು.ಅಖಿಲಭಾರತ ವೀರಶೈವ ಮಹಾಸಭಾದ ರಾಜ್ಯಘಟಕದ ಅಧ್ಯಕ್ಷರಾಗಿದ್ದರು.30 ವರ್ಷಗಳ ಕಾಲ ವಕೀಲ ವೃತ್ತಿ ಮಾಡಿದ ಇವರು ಹಲವು ಪ್ರಮುಖ ವ್ಯಾಜ್ಯಗಳನ್ನು ಜಯಸಿದ್ದರು.