ಅನುದಿನ ಕವನ-೧೬೫೬, ಕವಿ: ಲೋಕಿ, ಬೆಂಗಳೂರು

ವಿಸ್ತಾರಗೊಳ್ಳದಿರಲಿ
ನೋವುಗಳ ಸರಮಾಲೆ
ಒಳಹೊಕ್ಕು ನೋಡುವವರ
ಸಂಖ್ಯೆ ವಿರಳವಾಗುತ್ತಿರುವಾಗ

ಹೆಗಲಿನ ಸಮಾಧಾನಕಿಲ್ಲಿ
ಮರು ಹೊಂದಾಣಿಕೆ
ಎಂದಿಗೂ
ಸಮಾಧಾನವಿಯ್ಯದು

ಅರಿತವರು ಸಾವಿರ ಮೈಲಿ
ದೂರವಿದ್ದರೂ
ಅವರಷ್ಟೇ ಮಾತನಿತ್ತರೆ
ಅದೇನೋ ಸಮಾಧಾನ


-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು