ಬಳ್ಳಾರಿ: ಶಾಲಾ ಶಿಕ್ಷಣ ಮಂಡಳಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ, ,ಬಳ್ಳಾರಿ ಜಿಲ್ಲಾ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಭೋದಕೇತರ ಸಂಘ ಹಾಗೂ ಶ್ರೀ ಮೇಧಾ ಪ.ಪೂ ಕಾಲೇಜು ಬಳ್ಳಾರಿ ಇವರುಗಳ ಸಹಯೋಗದೊಂದಿಗೆ ಮೇಧಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಟಿ ಪಾಲಾಕ್ಷ ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡಿಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಧಾ ಕಾಲೇಜಿನ ಪ್ರಾಚಾರ್ಯರಾದ ರಾಮ್ ಕಿರಣ್ ಅವರು ವಹಿಸಿದ್ದರು.
ಗಣ್ಯರು, ಟಿ ಪಾಲಾಕ್ಷ ಅವರ ವ್ಯಕ್ತಿತ್ಚ ಆಡಳಿತ ವೈಖರಿ ತಾಳ್ಮೆ ಶಾಂತ ಸ್ಭಭಾವ ಶೈಕ್ಷಣಿಕ ಪ್ರಗತಿಯ ಬಗ್ಗೆ ಅವರಿಗಿದ್ದ ಕಾಳಜಿ ಮುಂತಾದ ಗುಣಗಳನ್ನು ಕುರಿತು ಪ್ರಾಚಾರ್ಯರ ಸಂಘದ ಅದ್ಯಕ್ಷರಾದ ಎಂ ಶ್ರೀಶೈಲ ಉಪಾದ್ಯಕ್ಷರಾದ. ಶ್ರೀಮತಿ ಸುಲೇಖ ಕಾರ್ಯದರ್ಶಿಗಳಾದ ಸಣ್ಣ ಶಿವಾರಾಂ ವಿಜಯನಗರ ಜಿಲ್ಲೆಯ ಪ್ರಾಚಾರ್ಯರ ಸಂಘದ ಅದ್ಯಕ್ಷರಾದ ನಾಗರಾಜ್ ಹವಾಲ್ದಾರ್ ಉಪನ್ಯಾಸಕರ ಸಂಘದ ಅದ್ಯಕ್ಷರಾದ ಡಾ ರಾಜಣ್ಣ ಪ್ರಾಚಾರ್ಯರಾದ ಎಂ ಟಿ ಗಿರೀಶ್, ನಾಗಲಿಂಗಸ್ವಾಮಿ ಸಗರದ ಗೋಪಾಲ್ ಭೋದಕೇತರ ಸಂಘದ ಅದ್ಯಕ್ಷರಾದ ಮದ್ದಿಕೇರಪ್ಪ ಅವರು ಮಾತನಾಡಿದರು, ಸುಗಮ ಆಡಳಿತಕ್ಕೆ ಸಹಕರಿಸಿದ ಕಛೇರಿ ಸಿಬ್ಬಂದಿ ವರ್ಗದವರಾದ ರಾಯಚೂಟಿ ಸ್ವಾಮಿ, ಸಿದ್ದೇಶ್, ಅಯೂಬ್ ಶರಣಯ್ಯ, ಅಶೋಕ್, ಇವರುಗಳನ್ನು ಹಾಗೂ ಪ್ರಾಚಾರ್ಯರ ಸಂಘದ ಅದ್ಯಕ್ಷರಾದ ಎಂ ಶ್ರೀಶೈಲ ಕಾರ್ಯದರ್ಶಿ ಸಣ್ಣ ಶಿವರಾಂ ಪ್ರಾಚಾರ್ಯರಾದ ಸಗರದ ಗೋಪಾಲ್ ಇವರನ್ನು ಉಪನಿರ್ದೇಶಕರಾದ ಟಿ ಪಾಲಾಕ್ಷರವರು ಸನ್ಮಾನಿಸಿದರು. ನಂತರ ಮಾತನಾಡಿದ ಅವರು ತಮ್ಮ ಎರಡು ವರ್ಷದ ಅನುಭವವನ್ನು ಹಂಚಿಕೊಂಡರು ಆರೋಗ್ಯ ಸಮಸ್ಯೆಯಿಂದಾಗಿ ನಾನು ಇನ್ನೂ ಉತ್ತಮ ಕಾರ್ಯ ಮಾಡಲಾಗಲಿಲ್ಲ ಎಂಬ ನೋವು ಇದೆ ಎಂದರು ಮುಂದುವರೆದು ತಮಗೆ ಉತ್ತಮ ಆಡಳಿತ ನೆಡೆಸಲು ಸಹಕರಿಸಿದ ಪ್ರಾಂಶುಪಾಲರ ಸಂಘದ ಪಧಾದಿಕಾರಿಗಳನ್ನು ಕಛೇರಿ ಸಿಬ್ಬಂದಿಯವರನ್ನು ಸ್ಮರಿಸಿಕೊಂಡರು, ನಂತರ ಪ್ತಾಚಾರ್ಯರ ಸಂಘದ ವತಿಯಿಂದ ಟಿ ಪಾಲಾಕ್ಷರವರನ್ನು ಸನ್ಮಾನಿಸಲಾಯಿತು, ವಿವಿಧ ಕಾಲೇಜುಗಳು ಪ್ರಾಚಾರ್ಯರು ಅವರ ಸಿಬ್ಬಂದಿ ವರ್ಗದವರು ಟಿ ಪಾಲಾಕ್ಷ ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪ್ರಾಚಾರ್ಯರ ಸಂಘದ ನೂತನ ಅದ್ಯಕ್ಷರಾಗಿ ಶ್ರೀ ಸಣ್ಣ ಶಿವರಾಂ ಇವರನ್ನು ಹಾಗೂ ನೂತನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು ಕಾರ್ಯಕ್ರಮದ ಆರಂಭದಲ್ಲಿ ಪ್ರಾಚಾರ್ಯರಾದ ಡಾ ಬಿ ಗೋವಿಂದ ರಾಜು ಸ್ವಾಗತಿಸಿದರು ಕನ್ನಡ ಉಪನ್ಯಾಸಕರಾದ ಎ.ಎಂ.ಪಿ ವೀರೇಶಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.