ಘನ ಶರಣ ನಿಜ ಶರಣ
ನಮ್ಮ ಬಸವಣ್ಣ
ಸತ್ಯ ಶರಣ…… ನಿತ್ಯ ಶರಣ……
ಅಣ್ಣ ಬಸವಣ್ಣ
ಕಳಬೇಡ ಕೊಲಬೇಡವೆಂದ
ಜ್ಞಾನಿ ಶರಣ
ಜಾತಿಬೇದ ವರ್ಣಬೇದ
ಮಾಡದ ಕಲ್ಯಾಣ ಶರಣ
ಅಂತರ್ಜಾತಿ ವಿವಾಹ
ಮಾಡಿಸಿದ ಶೂರ ಶರಣ
ಸಕಲ ಜಾತಿಗಳಿಗೂ
ಲಿಂಗಧೀಕ್ಷೆ ನೀಡಿದ ಗುರು ಶರಣ
ಘನ ಶರಣ ನಿಜ ಶರಣ/
ಅನುಭವ ಮಂಟಪದಿ
ಸಕಲರಿಗೂ ಅವಕಾಶವನಿಟ್ಟ
ನಿಷ್ಠ ಶರಣ
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಹೇಳಿಕೊಟ್ಟ ದಿಟ್ಟ ಶರಣ
ಶಾಸ್ತ್ರಗಳಿಗೆ ಹೊರೆಯಕಟ್ಟಿದ
ಕಾಯಕ ಶರಣ
ಮೂಢನಂಬಿಕೆಗಳ ದಿಕ್ಕರಿಸಿದ
ವಿಶ್ವಗುರು ಶರಣ
ಘನ ಶರಣ ನಿಜ ಶರಣ
ನಮ್ಮ ಬಸವಣ್ಣ
ಸತ್ಯ ಶರಣ…… ನಿತ್ಯ ಶರಣ……
ಅಣ್ಣ ಬಸವಣ್ಣ
-ಡಾ. ನಾಗೇಶ್ ಮೌರ್ಯ, ಹೊಸಕೋಟೆ
—–