ಸಂಕಷ್ಟದಲ್ಲಿದ್ದ ಪತ್ರಕರ್ತನ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅನಾರೋಗ್ಯದಿಂದ ಮೃತಪಟ್ಟಿದ್ದ ಹಿರಿಯ ಪತ್ರಕರ್ತ ಚನ್ನರಾಯಪಟ್ಟಣದ ಹೇಮಕುಮಾರ್ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ)
ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ತೀವ್ರ ಸಂಕಷ್ಟದಲ್ಲಿದ್ದ ಹೇಮಕುಮಾರ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಮ‌ೂಲಕ ಮನವಿ ಸಲ್ಲಿಸಿದ್ದನ್ನು ಪರಿಗಣಿಸಿ ಸಿಎಂ ಪರಿಹಾರ ಮಂಜೂರು ಮಾಡಿದ್ದರು.

ತಮ್ಮದೇ ಬ್ಯಾಂಕ್ ಅಕೌಂಟ್ ಗೆ ಪರಿಹಾರ ಹಣ ಬಂದಿರುವುದನ್ನು ಹೇಮಕುಮಾರ್ ಅವರ ಪತ್ನಿ ಗಿರಿಜಾ ಅವರು ಪೋನ್ ಮಾಡಿ ಖಚಿತಪಡಿಸಿ ಧನ್ಯವಾದ ತಿಳಿಸಿದ್ದಾರೆ.

ಹಾಸನದ ನಾಡಸಹ್ಯಾದ್ರಿ, ಜ್ಞಾನದೀಪ ಸೇರಿದಂತೆ ಹಲವು ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಹೇಮಕುಮಾರ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಕೆಯುಡಬ್ಲ್ಯೂಜೆ ಧನ್ಯವಾದ:ಸಂಕಷ್ಟದಲ್ಲಿದ್ದ ಹೇಮಕುಮಾರ್ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು  ಪೂರ್ಣ ಸಹಕಾರ ನೀಡಿದ್ದ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತ(ಕೆಯುಡಬ್ಲ್ಯೂಜೆ) ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಧನ್ಯವಾದ ಸಲ್ಲಿಸಿದ್ದಾರೆ.

One thought on “ಸಂಕಷ್ಟದಲ್ಲಿದ್ದ ಪತ್ರಕರ್ತನ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

  1. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರು  ಪತ್ರಕರ್ತ  ಹೇಮಕುಮಾರ್ ಅವರ ಕುಟುಂಬ ಸಂಕಷ್ಟ ದಲ್ಲಿ ರುವಾಗ ಸರಿಯಾದ ಸಮಯಕ್ಕೆ ಅವರಿಗೆ ಧನಸಹಾಯ ಮಾಡಿರುವುದು ಸ್ವಾಗತರ್ಹ ಮತ್ತು ಅವರಿಗೆ ಧನ್ಯವಾದಗಳು 🙏🙏🙏ಇದೇ ರೀತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಸುಮಾರು 10,15,20 ವರ್ಷಗಳಿಂದ ಪಾಠ ಪ್ರವಚನ  ನೀಡಿ ಅವರ ಬಾಳು ಬೆಳಗಿಸುವ ಕಾರ್ಯ ದಲ್ಲಿರುವ ಇವರಿಗೊಂದು ಸೇವಾ ಭದ್ರತೆ ನೀಡಿದರೆ ಎಷ್ಟೋ ಕುಟುಂಬ ಗಳು ತಮ್ಮನ್ನು ನೆನೆದು ಎರೆಡೊತ್ತು ಊಟ ಮಾಡುವರು ಎಂದು ಮಾನ್ಯ ಮುಖ್ಯ ಮಂತ್ರಿ ಗಳಲ್ಲಿ ಕಳಕಳಿಯ ವಿನಂತಿ.

    ಧನ್ಯವಾದಗಳು.

Comments are closed.