ಅನುದಿನ ಕವನ-೧೬೮೨, ಕವಯತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ

ಅವರೇನೊ
ವಿದಾಯ ಹೇಳಿ ಹೊರಟರು
ಆದರೀಗ ಅವನವಳ ನಡುವೆ
ನಿಜ ಪ್ರೇಮ ಅಂಕುರಿಸಿದೆ

ಜೊತೆಗಿದ್ದ
ಅಷ್ಟು ಕಾಲ ಕಚ್ಚಾಡಿ
ಕಾಲೆಳೆಯುವುದರಲ್ಲೇ ಕಳೆದುದೀಗ
ಚರಿತ್ರೆಯ ಪಳೆಯುಳಿಕೆ

ಈಗ
ವಿದಾಯ ಹೇಳಿ ಹೊರಟಾಗ
ನೆನಪಿನ ಸುರುಳಿ ಸರಾಗ ತಿರುತರುಗಿ
ಪರಿಚಯಿಸುತ್ತಿದೆ ಕಚ್ಚಾಟ ಪರಚಾಟಗಳೆಲ್ಲ
ಆಳ ಪ್ರೇಮದ ಕುರುಹುಗಳೆಂದು

ಅದರೆ
ಸಹಜ ಪ್ರೀತಿಯ ಅರಿಯದಪರಾದಕೆ
ವಿರಹವೊಂದೇ ಶಿಕ್ಷೆ ಅಲ್ಲ, ಅದರಾಚೆಗೆ
ಮತ್ತೆ ಪ್ರಬುದ್ಧ ಪ್ರೇಮ ಝೇಂಕಾರ


ಡಾ. ಭಾರತಿ ಅಶೋಕ್, ಹೊಸಪೇಟೆ
—–