ಬಳ್ಳಾರಿ, ಆ. 9: ದೀನ ದಲಿತರ ಪರ ಹೋರಾಡಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟದ ಮನೋಭಾವನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಅವರು ಹೇಳಿದರು.
ಅವರು ಶುಕ್ರವಾರ ನಗರದ ಕೆ.ಇ.ಬಿ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ ) ಪ್ರಸಿದ್ಧ ಹೋರಾಟಗಾರ ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಅವರ 88ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕರ್ತರ ರಾಜ್ಯ ಮಟ್ಟದ ಸ್ವಾಭಿಮಾನ ಸಂಘರ್ಷ ಚೈತನ್ಯ ಸಮಾವೇಶದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರೊ.ಬಿ.ಕೃಷ್ಣಪ್ಪ ಅವರು ಶೋಷಿತ, ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ಶೋಷಣೆ, ಹಿಂಸೆ ಹಾಗೂ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿದ್ದರು. ತಮ್ಮ ತನು, ಮನ, ಧನವನ್ನು ಧಾರೆ ಎರೆದು ದಲಿತ ಸಮುದಾಯ ಹಾಗೂ ಶೋಷಣೆಗೆ ಒಳಗಾದ ಎಲ್ಲಾ ಸಮುದಾಯವನ್ನು ಒಗ್ಗೂಡಿಸಿ ಅವರ ಏಳಿಗೆಗೆ ದುಡಿದ ಮಹಾನ್ ವ್ಯಕ್ತಿ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ದಲಿತ ಚಳವಳಿಯನ್ನು ಹುಟ್ಟುಹಾಕಿದ ಮಹಾನ್ ನಾಯಕ ಪ್ರೊ.ಬಿ.ಕೃಷ್ಣಪ್ಪ ಅವರ . ನಾವೆಲ್ಲರೂ ಅವರ ಹೋರಾಟದ ದಾರಿಯಲ್ಲಿ ಸಾಗಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕಮಲ ರತ್ನ ಬಂತೇಜಿ ಉದ್ಘಾಟಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಬಿ. ಶ್ರೀನಿವಾಸ ಮೂರ್ತಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ವಿ. ನಾರಾಯಣಸ್ವಾಮಿ , ಹೆಚ್. ಹನುಮಂತಪ್ಪ, ರಾಜ್ಯ ಸಂಚಾಲಕಿ ಭಾಗ್ಯಮ್ಮ ನಾರಾಯಣಸ್ವಾಮಿ, ಅಂದಾನಿ ಸೋಮನಹಳ್ಳಿ, ಆನೇಕಲ್ಲೂ ಕೃಷ್ಣಪ್ಪ, ಕಬ್ಬಳ್ಳಿ ಮೈಲಪ್ಪ, ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಅನಂತಕುಮಾರ್, ಮುಖಂಡರುಗಳಾದ ಈ. ಈಶ್ವರಪ್ಪ, ಸತ್ಯಬಾಬು, ಹೆಚ್. ವೆಂಕಟೇಶ್ ನಿವೃತ್ತ ಪ್ರಾಂಶುಪಾಲರು, ಎನ್.ಡಿ. ಯಂಕಮ್ಮ, ಆರ್. ಜಾಶ್ವ, ರಾಜ್ಯದ ರಾಜ್ಯ ಸಂ ಸಂಚಾಲಕರು, ವಿಭಾಗೀಯ ಸಂಚಾಲಕರು, ಹಾಗೂ ರಾಜ್ಯದ ಜಿಲ್ಲಾ ಸಂಚಾಲಕರು, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪ್ರಗತಿಪರ ಚಿಂತಕರು ಸಾಹಿತಿಗಳು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಸಂಚಾಲಕ ರಾಮಣ್ಣ ಚೆಳ್ಳಗುರ್ಕಿ ನಿರ್ವಹಿಸಿದರು.