ಅನುದಿನ ಕವನ-೧೬೮೫, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಮುತ್ತು!

“ಇದು ಮುತ್ತಿನ ಆಂತರ್ಯದ ಅನಾವರಣದ ಕವಿತೆ. ಚುಂಬನದ ಸೌಂದರ್ಯ ಮಾಧುರ್ಯ ಔದಾರ್ಯಗಳ ರಿಂಗಣಗಳ ಹನಿಗೀತೆ. ಈ ಕಿಸ್ಸಿನ ಕಿಸ್ಮತ್ತು ಕಿಮ್ಮತ್ತು ಘಮ್ಮತ್ತು ಪದಾತೀತ ಅತಿಶಯ. ಅವರ್ಣನೀಯ ವಿಸ್ಮಯ. ಏನಂತೀರಾ..?”                                                      – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.


ಮುತ್ತು.!

ಅಧರವೆಂಬ ಲೇಖನಿಯಲಿ
ಒಲವಿನ ಶಾಯಿಯಿಂದ
ಕದಪುಗಳ ಹಾಳೆ ಮೇಲೆ..
ಅನಂತಾನಂತ ಪ್ರೀತಿಯಲಿ

ಅಮಿತ ತನ್ಮಯತೆಯಲಿ
ಅಖಂಡ ಪರವಶತೆಯಲಿ
ಬರೆವ ಮಧು ಮಧುರ
ಅಮರ ಪ್ರೇಮಕಾವ್ಯ..!

ಜೀವ ಜೀವ ಬೆಸೆಯುವ
ಅನುರಾಗಮೃತ ದ್ರವ್ಯ.!
ಯುಗ ಯುಗದ ಜಗದ
ಚಿರಚಿರಂತನ ಭಾವಭಾಷ್ಯ!


-ಎ.ಎನ್.ರಮೇಶ್.ಗುಬ್ಬಿ.