ನೊಂದ ಹೂವು
ಹೂವ ಮನ ನೊಂದಿದೆ
ತಂಪೆರೆಯುವ ಮಳೆಯ ಹನಿಗೂ ಇದರ ಕಣ್ಣೀರು ಬಗ್ಗದೆ
ಅಳುಕುತಿದೆ ಗೊತ್ತಿಲ್ಲ
ಒಂಟೆತ್ತಿನ ಬಂಡಿಯ ಗಾಲಿ ಯು ಹೂವ ಎದೆಯನು
ತುಳಿದಿದೆ ಸಾಲದೇ ವರ್ಗಗಳ ಸಾಲಿನಲಿ ಶ್ರೀಮಂತಿಕೆಯ ಕುಸುಮಗಳು ಬಡ ಹೂವ ಮನಸನ್ನ ಹೊಸಕಿ ಹಾಕಿವೆ ಈ ಹಾರೆಯ ಬಿಗಿತಕೆ ನೊಂದ ಹೂವಿನ ಮನ ಈ ಭೂಮಿಯನೇ ತೊರೆಯುವ ಹಠದಿ ಹತಾಷೆ ಗೈದು ಮನದಲ್ಲೇ ಕನಸುಗಳ ಕೊಂದು ಅಶಾಂತಿಯ ಅಲೆಯ ನೋಡುತ ಕಮರುತ್ತಿದೆ. ಜಗದ ಸಮಾಜದೊಳು ಸತ್ತು ಬದುಕುವುದಕ್ಕಿನ ಬದುಕಿ ಸಾಯಲು ಯೋಚನೆ ಮಾಡುತ್ತಿದೆ.. ಸುತ್ತಲೂ ಅತಂತ್ರ ವ್ಯವಸ್ಥೆ ಯಾವ ಕಡೆಯ ದಾರಿಯೂ ಹಾದಿಯ ಬಿಡದೇ ಒದ್ದಾಡುತಿದೆ. ಪ್ರಕೃತಿಯ ಸೃಜನದಿ ನವ ಚೈತನ್ಯ ದ ಬೆಳಕು ಹುಡುಕುತಿದೆ ಅಘೋರ ಕ್ರೂರ ಮೃಗಗಳ ನೆಲೆಸಿರುವ ಈ ಬದುಕಿನಡಿ ತನ್ನೊಳಗೆ ಒಂಟಿತನವ ಬೇಲಿ ಹಾಕಿಕೊಂಡು ಪ್ರತಿ ದಿನವೂ ಚಿತೆ ಯತ್ತ ಮುಖ ಮಾಡಿ ಬೇಡುತಿದೆ. ನಶ್ವರದ ಇಣುಕಿನಲಿ ಕಿಟಕಿ ಗೋಡೆ ಯಲ್ಲ ಕತ್ತಲೆ. ಇದಕೆ ಕಂದೀಲು ಕೂಡ ಅಗಳಿಯ ಚಿಲುಕ ಹಾಕಿದೆ… ಘಾಸಿಗೊಂಡ ಮನಕೆ ತತ್ವ ಸಂದೇಶ ಇಷ್ಟವಿಲ್ಲದ ಕಲ್ಲ ಹರಳು ಸೀಮೆ ಸುಣ್ಣವ ಬಳಿದು ಮತ್ತಷ್ಟು ಎದೆಯ ಇರಿತದಿ ತೂತು ಮಾಡಿವೆ.. ನಗುವೆಂಬುದು ನೊಂದ ವ್ಯಥೆ ಗೆ ಹುಸಿಯಾಗಿದೆ. ಸುತ್ತಲೂ ಹಲವು ಬಣ್ಣಗಳ ವ್ಯಂಗ್ಯ ನಗೆ ಇರುವ ಕ್ಷಣಕ್ಕೆ ಬೇಸರದ ದಿಗಿಲು ಬಡ ಬಡಿಸಿದೆ… ಇಷ್ಟೆಲ್ಲ ವಿರುವ ಹಾವಳಿಯಲಿ ಹೊಸ ಬೆಳಕ ಸ್ಪರ್ಶ ಎನಗೆ ತಾಕೀತೆ ಎನ್ನುತ ದೈವವನು ಪ್ರಶ್ನಿಸಿದೆ….
-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ
—–