ಡಿ.ಕಗ್ಗಲ್: ಕೆ ಎಂ ಶಿವರುದ್ರಮ್ಮ ವಿಧಿವಶ

ಬಳ್ಳಾರಿ, ಆ.21: ಬಳ್ಳಾರಿ ಜಿಲ್ಲಾ  ಕನ್ನಡ ಪ್ರಭ ದಿನಪತ್ರಿಕೆಯ ಹಿರಿಯ ವರದಿಗಾರ ಕೆ.ಎಂ. ಮಂಜುನಾಥ ಅವರ ತಾಯಿ ಕೆ ಎಂ ಶಿವರುದ್ರಮ್ಮ(82 ವರ್ಷ) ಅವರು ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.                                    ಅವರಿಗೆ 82 ವರ್ಷಗಳಾಗಿದ್ದವು. ಕೆ.ಎಂ. ಮಂಜುನಾಥ ಸೇರಿದಂತೆ ಎಂಟು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.                                            ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಅನಾರೋಗ್ಯದ‌ ನಿಮಿತ್ತ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಬೆಳಿಗ್ಗೆ 7.30ಕ್ಕೆ ನಿಧನರಾಗಿದ್ದು,  ಸಂಜೆ 3 ಗಂಟೆಗೆ ಡಿ. ಕಗ್ಗಲ್ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.