Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಪಾಸ್ಟರ್ ಜೆ.ಥಾಮಸ್ ಗುಣಾಲನ್ ಸ್ಮರಣೀಯ ದಿನ: ರಕ್ತದಾನ ಶಿಬಿರ - Karnataka Kahale

ಪಾಸ್ಟರ್ ಜೆ.ಥಾಮಸ್ ಗುಣಾಲನ್ ಸ್ಮರಣೀಯ ದಿನ: ರಕ್ತದಾನ ಶಿಬಿರ

ಬಳ್ಳಾರಿ: ರಕ್ತದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸಬಹುದು ಎಂದು ಪಾಸ್ಟರ್ ಡೆವಿಡ್ ಟಿ ಗುಣಲಾನ್ ತಿಳಿಸಿದರು.
ಇಲ್ಲಿನ ವಿದ್ಯಾನಗರದ 10ನೇ ವರ್ಷದ ಪಾಸ್ಟರ್ ಜೆ.ಥಾಮಸ್ ಗುಣಾಲನ್ ಸ್ಮರಣೀಯ ದಿನದಂದು
ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಜೀವನವನ್ನು ಸಂಪೂರ್ಣವಾಗಿ ದೇವರ ಸೇವೆಗೆ, ಸಭೆಯ ಆತ್ಮೀಯ ಬೆಳವಣಿಗೆಗೆ ಮತ್ತು ಸಮಾಜದ ಹಿತಕ್ಕಾಗಿ ಸಮರ್ಪಿಸಿಕೊಂಡ ಮಹಾನ್ ದಾಸರಾಗಿದ್ದ ಅವರ ಪ್ರಾರ್ಥನಾ ಜೀವನ, ಪ್ರೀತಿ, ತ್ಯಾಗ ಮತ್ತು ಬೋಧನೆಗಳು ಇಂದಿಗೂ ನಮ್ಮ ಜೀವನಗಳಿಗೆ ದಾರಿದೀಪವಾಗಿವೆ ಎಂದರು.
ದೇವರ ಸೇವೆಯ ಮೂಲಕ ಅನೇಕ ಕುಟುಂಬಗಳು ಆಶೀರ್ವಾದವನ್ನು ಪಡೆದಿವೆ, ಅನೇಕ ಹೃದಯಗಳು ದೇವರ ಕಡೆಗೆ ತಿರುಗಿವೆ. ಅವರು ಬಿತ್ತಿದ ವಿಶ್ವಾಸದ ಬೀಜಗಳು ಇಂದು ಸಮೃದ್ಧ ಫಲವನ್ನು ನೀಡುತ್ತಿವೆ.ನ್ಯಾಯ ಪರವಾದ ಹೋರಾಟ ಮತ್ತು  ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ನಾವು ಸಂಕಲ್ಪಿಸೋಣ. ಅವರ ಸ್ಮರಣೆ ನಮ್ಮಲ್ಲಿ ಹೊಸ ಉತ್ಸಾಹ, ಭಕ್ತಿಭಾವ ಮತ್ತು ಸೇವಾ ಮನೋಭಾವವನ್ನು ಹುಟ್ಟಿಸಲಿ ಎಂದು ಪ್ರಾರ್ಥಿಸೋಣ ಎಂದರು.
ಪಾಸ್ಟರ್ ಜೆ. ಥಾಮಸ್ ಗುಣಾಲನ್ ಅವರು ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಇದ್ದ ಸಂದರ್ಭದಲ್ಲಿ, ಅವರನ್ನು ವೈಯಕ್ತಿಕವಾಗಿ ಪರಿಚಯವಿಲ್ಲದ ಅನೇಕ ಅಪರಿಚಿತ ದಾನಿಗಳು ಮಾನವೀಯತೆಯಿಂದ ಪ್ರೇರಿತರಾಗಿ ರಕ್ತದಾನ ಮಾಡಿ ಅವರ ಚಿಕಿತ್ಸೆಗೆ ಸಹಾಯ ಮಾಡಿದರು. ಆ ನಿಸ್ವಾರ್ಥ ಸೇವೆ ಮತ್ತು ಮಾನವ ಪ್ರೀತಿಯೇ ಆ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಮಹತ್ತರವಾದ ಧೈರ್ಯವನ್ನು ನೀಡಿತು. ಆ ಅಪರಿಚಿತ ದಾನಿಗಳ ಅಮೂಲ್ಯ ಕೊಡುಗೆಯನ್ನು ಗೌರವಿಸಿ, ಅವರ ಮಾನವೀಯತೆಯನ್ನು ಸ್ಮರಿಸುವ ಉದ್ದೇಶದಿಂದಲೇ, ರೇವ್ ಜಿ.ಥಾಮಸ್ ಗುಣಾಲನ್ ಅವರ ಕುಟುಂಬದವರ ವತಿಯಿಂದ ಈ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಒಟ್ಟು 70ಕ್ಕಿಂತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಡ್ಯಾನಿಯಲ್ ಟಿ ಗುಣಲಾನ್, ದಿನೇಶ್ ಟಿ ಗುಣಲಾನ್ ಸೇರಿದಂತೆ ಮತ್ತಿತರರು ಇದ್ದರು.
—–