ಮೆರೆಸೋಣ ಸ್ವಂತಿಕೆ
ಸ್ವಂತ ದೇಶ ಬಿಟ್ಟು ಹೊರಗೆ
ಬಾಳುವಾಸೆ ಏತಕೆ
ಪರದೇಶದ ದಾಸ್ಯವೇಕೆ
ಮೆರೆಸಬೇಕು ಸ್ವಂತಿಕೆ
ಇಲ್ಲೆ ಹುಟ್ಟಿ ಇಲ್ಲೆ ಬೆಳೆದು
ದುಡಿಮೆ ಹೊರಗದೇತಕೆ
ಬೆಳೆಸಿದಂಥ ದೇಶವನ್ನು
ತೊರೆದು ಹೋಗಲೇತಕೆ
ನಮ್ಮ ದೇಶ ನಮ್ಮ ಹೆಮ್ಮೆ
ಎಂಬ ಭಾವ ಬೆಳೆಯಲಿ
ತಾಯ ನೆಲವ ಬೆಳಗುವಂಥ
ಮನಸು ಸೃಷ್ಟಿಯಾಗಲಿ
ನಮ್ಮನವರು ಹಣವ ಕೊಟ್ಟು
ಕಾಡಿ ಬೇಡಿ ಕರೆಸಲಿ
ಅಂತೆ ಬೆಳೆದು ತೋರಿಸೋಣ
ಧೈರ್ಯ ಮುಗಿಲು ಮುಟ್ಟಲಿ
ನಮ್ಮೊಳಿರುವ ಸ್ವತ್ವವನ್ನು
ಇಲ್ಲೆ ಹೊರಗೆ ತೆಗೆಯುವ
ಭಾರತಕ್ಕೆ ಮಣಿ ಮುಕುಟವ
ನಾವೆ ದುಡಿದು ತೊಡಿಸುವ
– ಶೀಲಾ ಅರಕಲಗೂಡು
******