ಬಳ್ಳಾರಿ ಪತ್ರಕರ್ತ ಹೊನ್ನುರಸ್ವಾಮಿ ಕೆ.ಟಿ ಅವರಿಗೆ ರಾಷ್ಟ್ರಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ

ಬಳ್ಳಾರಿ, ಸೆ.23: ನಿರಂತರ ಜಿಲ್ಲೆಯ ಸಮಸ್ಯೆಗಳ ಕುರಿತು  ಬೆಳಕು ಚೆಲ್ಲುತ್ತಿರುವ  ಸಂಜೆವಾಣಿ ದಿನಪತ್ರಿಕೆಯ ಉಪಸಂಪಾದಕ, ಜನಕೂಗು, ವಿಜಯ ವಿಶ್ವವಾಣಿ ಪತ್ರಿಕೆ, ಬಂಗಾರದ ಗಣಿ ಮತ್ತು ಪಬ್ಲಿಕ್ ನೆಕ್ಸ್ಟ್ ಚಾನೆಲ್ ಜಿಲ್ಲಾ ವರದಿಗಾರಾದ ಹೊನ್ನುರಸ್ವಾಮಿ ಕೆ.ಟಿ ಯವರಿಗೆ ರಾಷ್ಟ್ರಮಟ್ಟದ “ಮಾಧ್ಯಮ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕೆಲ ವರ್ಷಗಳಿಂದ ಸಾಧಕರನ್ನ ಗುರುತಿಸಿ ಗೌರವಿಸುವ ಕಾರ್ಯಕ್ಕೆ ಮುಂದಾಗಿದ್ದು 120ನೇ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ ಪ್ರತಿವರ್ಷ ಕೊಡಮಾಡುವ ರಾಷ್ಟ್ರ ಮಟ್ಟದ “ಮಾಧ್ಯಮ ರತ್ನ” ಪ್ರಶಸ್ತಿಗೆ ಹೊನ್ನುರಸ್ವಾಮಿ ಕೆ. ಟಿ ಆಯ್ಕೆಯಾಗಿದ್ದರು.

ಹೊನ್ನುರಸ್ವಾಮಿ ಕೆಟಿಯವರು ಮಾಧ್ಯಮ ಕ್ಷೇತ್ರದಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಸದಾ ಹೊಸತನದ ಸುದ್ದಿಗಳನ್ನು ಬರೆಯುವ ತುಡಿತ, ಕ್ರಿಯಾಶೀಲತೆಯನ್ನು ಹೊದಿರುವ ಇವರಿಗೆ ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಂಸ್ಥೆಯ 120 ನೇ ರಾಷ್ಟ್ರ ಮಟ್ಟದ ಬೆಳಕು ಸಮ್ಮೇಳನದಲ್ಲಿ ರಾಷ್ಟ್ರ ಮಟ್ಟದ ‘ಮಾಧ್ಯಮ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೊನ್ನುರಸ್ವಾಮಿ ಕೆ ಟಿ ಅವರು,  ಕಲಾವಿದರ ಕಲೆಯನ್ನು ಹೊರ ತಂದು ಅವರ ಕಲೆಗೆ ಪ್ರೋತ್ಸಾಹಿಸುವ ಮತ್ತು ಕಲಾವಿದರನ್ನು ಮುಖ್ಯ ವಾಹಿನಿಗೆ ತರುವ ಕಾರ್ಯವನ್ನು ಬೆಳಕು ಸಂಸ್ಥೆ ಮಾಡುತ್ತಿದೆ ಪ್ರಶಸ್ತಿ ಪುರಸ್ಕಾರಗಳಿಂದ ಸಾದಕರ ಕೀರ್ತಿ ಹೆಚ್ಚಿಸುವುದರ ಜೊತೆಗೆ  ಹೆಚ್ಚಿನ ಜವಾಬ್ದಾರಿ ಹೆಗಲಿಗೆ ಹೇರುವ ಕಾರ್ಯಕ್ಕೆ ಮುಂದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪುಟ್ಟಮಾದಯ್ಯ,
ಸಮ್ಮೇಳನಾಧ್ಯಕ್ಷ ಸ್ಥಾನವನ್ನು ನಾಗಮಂಗಲದ ಸಾಹಿತಿ ಹಾಗೂ ಉಪನ್ಯಾಸಕ ಚಿಕ್ಕಣ್ಣ.ಡಿ.ಪಿ, ಬೆಳಕು ಟ್ರಸ್ಟ್ ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ ಹಾಗೂ ಮತ್ತಿತರ ಗಣ್ಯರು ಭಾಗಿಯಾಗಿದ್ದರು.