ಎಲ್ಲರೂ ಹೇಳುತಿಹರು
ಅವಳು ಹೋದ ಮೇಲೆ
ಎಲ್ಲರೂ ಹೇಳುತಿಹರು
ಬಹುಶ: ನೀನು ಅದೇ ನೋವಿನಲ್ಲಿ
ಒಂಟಿತನದಲ್ಲಿ ಮುಳುಗಿರಬಹುದು ಎಂದು
ಏನು ಹೇಳಲಿ….
ನೋವಿನಲ್ಲಿರಲು ಮತ್ತು ಒಂಟಿಯಾಗಿರಲು
ನನಗೆ ಯಾವತ್ತೂ ಸಮಯವೇ ಸಿಗಲಿಲ್ಲ
ಅವಳು ಈಗಲೂ ಭೇಟಿಯಾಗುವಳು
ಬೆಳಗಾಗಿ, ಸಂಜೆಯಾಗಿ
ಮತ್ತು ಆಗಾಗ ಕವಿತೆಯಾಗಿ
ನಾವು ಎಷ್ಟೊ ಹೊತ್ತು
ಒಬ್ಬರಿಗೊಬ್ಬರು
ನೋಡುತ್ತಲೇ ಇದ್ದೇವೆ
ಮತ್ತು
ಇಬ್ಬರೂ ಒಂದಾಗಿ
ನಮ್ಮ ನಮ್ಮ ಬದುಕಿನ ಕವಿತೆಯನ್ನು
ಕೇಳುತ್ತಲೇ ಇದ್ದೇವೆ
ಹಿಂದಿ ಮೂಲ : ಇಮ್ರೋಜ್

ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ
