ಅನುದಿನ ಕವನ-೧೭೪೫, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು

ನೀ ತಿರಸ್ಕರಿಸಿ ನನ್ನೊಲವಿಗೆ ಬೆನ್ನು ಹಾಕಿದಾಗಲೇ
ನಾ ಕಂಬನಿ ತುಂಬಿದ ಕಂಗಳಲ್ಲಿ ಸಿಗದ ಬದುಕಿಗೆ ಮರುಗಬಾರದೆಂದು
ಹೊಸ ಜೀವನಕೆ ಭರವಸೆಯ ದೀಪ‌ ಬೆಳಗಿಸಿಬಿಟ್ಟೆ!
ನೀ ತಿರುಗಿ ನೋಡದೇ ಹೋಗಿ ಕೆಟ್ಟೆ!
ನಿನ್ನ ಪ್ರೀತಿಯಿಂದ ವಂಚಿತಳಾಗಿ ನಾ ಬಿಕ್ಕಿ..ಬಿಕ್ಕಿ ಅತ್ತೆ!
ಆದರೂ ಗೆಲವು ನನದಾಗಿತ್ತು
ಕಾಲ ಮಿಂಚಿತ್ತು!
ತಡವಾಗಿಯಾದರೂ.
ನಾ ನಿನಗೆ ………

ನನ್ನ ಕಳೆದುಕೊಂಡ ವಿಷಾದ,ವಿರಹದ ನೋವನ್ನೇ ಕಾಣಿಕೆಯಾಗಿ ಕೊಟ್ಟೆ!

ಇಂತಿ‌ ನಿನ್ನ…..!?

-ಶಾಂತಾ ಪಾಟೀಲ್, ಸಿಂಧನೂರು

—–