ಅನುದಿನ ಕವನ-೧೭೭೪, ಕವಯತ್ರಿ: ಡಾ. ಸುಮ ವೈ, ಬಳ್ಳಾರಿ, ಕವನದ ಶೀರ್ಷಿಕೆ:ಅಂತಃಶಕ್ತಿ

ಅಂತಃಶಕ್ತಿ

ರಸ್ತೆಯ ಬದಿಯಲೊಂದು ಪುಟ್ಟ ಗೂಡಂಗಡಿ

ಅಗಲೀಕರಣದ ನೆಪವೊಡ್ಡಿ ನೆಲ ಸಮಗೊಳಿಸಿದರೆ ಅದನು

ದಿಕ್ಕು ತೋಚದಂತಾದ ಅಂಗಡಿಯ ಮಾಲೀಕ

ಹೊಟ್ಟೆಪಾಡಿಗೆಂದು ಹೊಸ ದಾರಿ ಹುಡುಕಲು ಆರಂಭಿಸಿದ

ಶಾಲೆಯ ಮುಂದೊಂದು ಬಲೂನಿನ ಸೈಕಲ್ ಹಿಡಿದ

ಹಿಲಿಯಂ ಹೊಂದಿದ ಬಣ್ಣ ಬಣ್ಣದ ಬಲೂನುಗಳು

ಅದಕಂಡು ಮಕ್ಕಳು ಓಡಿಬರತೊಡಗಿದರು

ಕೆಲವರಿಗೆ ಕೆಂಪು ಇಷ್ಟವಾದರೆ ಮತ್ತೆ ಕೆಲವರಿಗೆ ಹಳದಿ

ಇನ್ನೊಂದಿಷ್ಟು ಜನಕ್ಕೆ ಹಸಿರು, ಗುಲಾಬಿ

ಅವುಗಳನ್ನು ಆಕಾಶದೆತ್ತರಕ್ಕೆಸೆದು ಹಾಡಿ ಕುಣಿಯತೊಡಗಿದರು

ಇದ ಕಂಡ ಮುಗ್ಧ ಬಾಲಕನೋರ್ವ ಬಳಿ ಬಲೂನಿನವನ ಬಳಿಗೋಡಿದ

ಕೆಂಪು ಬಣ್ಣದ್ದು ಅಷ್ಟೇ ಎತ್ತರಕ್ಕೆ ಹೋಗುವುದೇ ಅವನ ಪ್ರಶ್ನೆ
ಹೌದೆಂದ ಬಲೂನಿನವ

ಹಳದಿಯದು ಅದು ಹೋಗುವುದೆಂದ ಬಲೂನಿನವ

ಮಗು ಒಂದೊಂದು ಬಣ್ಣವನ್ನು ಕೇಳುತ್ತಾ ಕಡೆಗೆ ಕಪ್ಪು ಬಣ್ಣದ್ದು ಮೇಲೇರುವುದೇ

ನಗುನಗುತ್ತಾ ಅವ ಹೇಳಿದ ಮಗು ಅದನ್ನು ಮೇಲಕ್ಕೆ ಇರಿಸುವುದು ಬಣ್ಣವಲ್ಲ ಅದರೊಳಗಿನ ಗಾಳಿ

ಅದಕ್ಕೆ ಪ್ರಭಾವ ಹಣ ಎಷ್ಟೇ ಬಳಸಿದರೂ ಮೇಲೇರುವುದಕ್ಕೆ ಆಗುವುದಿಲ್ಲ ನಮ್ಮೊಳಗಿನ ಸಾಮರ್ಥ್ಯವೇ ಮೇಲೊಯ್ಯವುದು ಎಂದ

ಅದಕ್ಕೆ ನಮ್ಮಲ್ಲಿ ಪ್ರತಿಭೆ ಶಕ್ತಿ ಶ್ರಮವೆಂಬ ಅಂತಶಕ್ತಿ ಇದ್ದರೆ ಹೇಳಿಕೆಯನ್ನು ತಡೆಯಲಾಗುವುದಿಲ್ಲ ಎಂದ ಮಗುವಿನ ಕೆನ್ನೆ ತಟ್ಟಿದ

ಇದರಿತ ಮಗು ಖುಷಿಖುಷಿಯಾಗಿ ಮನೆಯತ್ತ ಓಡಿತು

-ಡಾ. ಸುಮ ವೈ, ಬಳ್ಳಾರಿ