ಪ್ರೀತಿಸುವುದು ಬಲು ಸಲುಭ
ಪ್ರೀತಿಸುವುದು ಬಲು ಸಲುಭ
ನಾನು ನೀನಾದರಾಯಿತು.
ಉಲಿವುದೆಲ್ಲವೂ ಪ್ರೀತಿಯೇ
ಆದರೆ ಹಾಗೆ ನಟಿಸುವುದು?
ಹಾಗೆ ನಟಿಸುವುದಕ್ಕೆ
ನೀನು ನೀನಾಗಿರಲೇಬೇಕು
ಪ್ರತಿ ಕ್ಷಣವೂ
ಪ್ರೀತಿಸುವುದು ಬಲು ಸುಲಭ
ಮಾತಿಗೆ ತಡಕಾಡುವಂತಿಲ್ಲ,ನಾಲಿಗೆಗೆ ಜರಡಿ ಬೇಕಿಲ್ಲ
ಆದರೆ ಹಾಗೆ ನಟಿಸಲು
ಮಾತು ಮಥಿಸಬೇಕು
ಪ್ರೀತಿಸುವುದು ಬಲು ಸುಲಭ
ಮಡಿಲ ಶಿಶುವಾದಂತೆ
ತೊದಲು ನುಡಿವುದೆಲ್ಲಾ
ಪ್ರೀತಿ ಪರಿಭಾಷೆ
ಆದರೆ ಹಾಗೆ ನಟಿಸುವುದಕೆ
ಸುಳ್ಳಿನ ಪದ ಕೋಶ ರಚಿಸಲೇಬೇಕು

-ಡಾ. ಭಾರತಿ ಅಶೋಕ್, ಹೊಸಪೇಟೆ
