ಅನುದಿನ ಕವನ-೧೮೪೫, ಯುವ ಕವಿ: ವಿಜಯಭಾಸ್ಕರ್ ಎಂ., ಸೇಡಂ, ಕವನದ ಶೀರ್ಷಿಕೆ: ನಗು!

ನಗು!

ಅಷ್ಟು ನಗದಿದ್ದರೆ ಏನಂತೆ
ಒಳಗಿನ ನೋವ ಮರಿಲಾಕ್ಕಾದರೂ
ನಗಬೇಕು ಸಲೀಸದಾ ಹಲ್ಲು ಗಿಂಜಿ
ತುಟಿ ತೀಡಿ ನಕ್ಕ ನಗುವಲ್ಲಿ ಅಳಲು ಅಡಗಿದೆ

ನಾಳೆ ನಾಡಿದ್ದು ಖುಷಿ ಸಿಗಬಹುದು
ಇಂದು ದೊರಕಿದ ದಿನ ಬಾರದು
ಎಷ್ಟೋ ವರುಷಗಳ ಕಾಲ ಇದ್ದು
ಸವೆಸುವ ದಿನಗಳು ನೋವು ಭರತವಿದ್ದಾಗಲೂ
ನಗಬೇಕು ನಕ್ಕು ಹಗುರಾಗಬೇಕು

ಅತ್ತು ಹಗುರಾಗುವುದು ಬದಿಗಿಡಿ
ನಕ್ಕು ಹಗುರಾಗುವ ಹೊಸ ಉನ್ಮಾದವ ಹೊಕ್ಕು
ಜಗವ ತಣಿಸುವ ನಗುವಿಗೆ ಜೋತುಬೀಳಿ
ಮೇಲಿಂದ ಮೇಲೆ ದೂರುವ ಪ್ರಶ್ನೆಗಳಿಗೆ ನಕ್ಕು ಸುಮ್ಮನಾಗಿ

ಅಲ್ನೋಡಿ ಆತ ನಕ್ಕು ಸತ್ತ ಎನ್ನಲಾಗದೆ
ಅತ್ತು ಅಂಗಲಾಚಿ ಪ್ರಾಣ ಬಿಟ್ಟ ಎನ್ನುತ್ತಾರೆ
ಈ ಶಹರದೊಳಗಡೆ ಎಲ್ಲವೂ ಹುಸಿಯಾಗಿಸಬಹುದು
ನಗುವಿನ ಕ್ಷಣಗಳನ್ನಲ್ಲ
ಮಾತಲ್ಲಿ ನಗುವಿನ ಮಮತೆ ಇರದಿದ್ದರೆ ಮಾತಿಗೂ ಅರ್ಥವಿರುವುದಿಲ್ಲ.

-ವಿಜಯಭಾಸ್ಕರ್ ಎಂ., ಸೇಡಂ

Leave a Reply

Your email address will not be published. Required fields are marked *