ನನ್ನ ಮನದ ಮೌನ ಮಂದಿರದಲ್ಲಿ
ದಿನವೂ ದೀಪ ಬೆಳಗಲಿದೆ ,
ಕೋಪದ ಕತ್ತಲೆಯನ್ನು ಸೀಳಿ
ಕರುಣೆಯ ಬೆಳಕು ಹರಡಲಿದೆ.
ನೋವಿನ ಮಾತುಗಳು ಹೋಗಿ,
ಸ್ಮೃತಿಗಳ ನೆರಳು ಮಂಕಾಗಿ,
ಕ್ಷಮೆಯ ಮೃದುವಾದ ಸ್ವರದಲ್ಲಿ
ಮನದ ನೋವು ಕರಗುತ್ತದೆ.
ಬಂಧನದ ದ್ವೇಷದ ಸರಪಳಿ
ಕ್ಷಮೆಯ ಸ್ಪರ್ಶದಲ್ಲಿ ತುಂಡಾಗುತ್ತದೆ,
ಬಿಡುವಿಕೆಯ ಆ ಕ್ಷಣದಲ್ಲಿ
ಆತ್ಮವು ಸ್ವತಂತ್ರವಾಗಿ ನಲಿಯುತ್ತದೆ.
ಪ್ರತೀ ದಿನ
ನನ್ನ ಹೃದಯ ಹೇಳುತ್ತದೆ ನಿಶ್ಚಯವಾಗಿ—
ದಯೆಯ ದಾರಿಯಲ್ಲಿ ನಡೆಯುವ
ನನ್ನ ಅನುದಿನದ ‘ಮಂತ್ರ’ ಕ್ಷಮೆ 🌿

-ಡಾ. ಸುರೇಶ್ ಅಮ್ಮಸಂದ್ರ, ಮೈಸೂರು
