ಮೇ 31 ರಂದು ಬಳ್ಳಾರಿಯಲ್ಲಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ -ಅಧ್ಯಕ್ಷ ಗೂಳೆಪ್ಪ ಬೆಳ್ಳೇಕಟ್ಟೆ

ಬಳ್ಳಾರಿ, ಮೇ 29: ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ 2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮೇ 31ರಂದು ಭಾನುವಾರ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜರುಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗೂಳೆಪ್ಪ ಬೆಳ್ಳೇಕಟ್ಟೆ ಅವರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ  ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಂದು 10-30 ಗಂಟೆಗೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಮತ್ತು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಮತ್ತು ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಹುಬ್ಬಳ್ಳಿ ಪೂರ್ವ ಶಾಸಕರಾದ ಅಬ್ಬಯ್ಯ ಪ್ರಸಾದ್  ಮತ್ತ  ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧದಯಕ್ಷರೂ ಆಗಿರುವ ಮಳವಳ್ಳ  ಶಾಸಕ ಪಿ.ಎಂ ನರೇಂದ್ರ ಸ್ವಾಮಿ ಅವರು  ಕಾರ್ಯಕ್ರಮ ಕ್ಕೆ ಚಾಲನೆ ನೀಡುವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ  ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ,  ಚಿತ್ರದುರ್ಗ ಛಲವಾದಿ ಮಹಾಮಠದ  ಶ್ರೀ ಬಸವನಾಗಿದೇವ ಸ್ವಾಮೀಜಿ,   ಭಾರತೀಯ ಬೌದ್ಧ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕದ ಶ್ರೀ ಕಮಲರತ್ನ ಭಂತೇಜಿ  ಅವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.
ಬುದ್ಧ ಬಸವ ಅಂಬೇಡ್ಕರ್ ಭಾವಚಿತ್ರಕ್ಕೆ ಸಂಸದ ಈ ತುಕಾರಾಂ, ಮಾಜಿ ಸಚಿವರೂ ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ, ನಗರ ಶಾಸಕರಾದ ನಾರಾ ಭರತರೆಡ್ಡಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಕಂಪ್ಲಿ ಶಾಸಕರಾದ ಜೆ ಎನ್ ಗಣೇಶ್, ಶಾಸಕರಾದ ಸಿರುಗುಪ್ಪದ ಬಿ ಎಂ ನಾಗರಾಜ್, ಸಂಡೂರಿನ ಅನ್ನಪೂರ್ಣ ತುಕಾರಾಂ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಪುಷ್ಪಾರ್ಚನೆ ನೆರವೇರಿಸುವರು ಎಂದು ತಿಳಿಸಿದರು.


ಸಂಘದ ಗೌರವಾಧ್ಯಕ್ಷರಾದ ಡಾ. ಸಿ ಹೆಚ್ ಸೋಮನಾಥ ಅವರು ಪ್ರತಿಭಾ ಪುರಸ್ಕಾರದ ಕುರಿತು ಮಾಹಿತಿ ನೀಡಿ,  ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಛಲವಾದಿ ಸಮಾಜದ ನೂರು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದ್ದು, ಕರ್ನಾಟಕ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರೂ, ನಿವೃತ್ತ ಐಎಎಸ್ ಅಧಿಕಾರಿ ಹೆಚ್.ಸಿದ್ದಯ್ಯ, ಬಳ್ಳಾರಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಸಿಎಂಎಸ್ ರಾಜ್ಯಾಧ್ಯಕ್ಷರಾದ ವಾಣಿ ಕೆ. ಶಿವರಾಂ, ಕರ್ನಾಟಕ ರಾಜ್ಯ ಪ.ಜಾ ಮತ್ತು ಪ.ಪಂಗಳ ಆಯೋಗದ ಅಧ್ಯಕ್ಷ ಡಾ.‌ಮೂರ್ತಿ ಎಲ್, ಕುಡುತಿನಿ ಕೆಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕೆ. ಎಸ್. ಗಂಗಾಧರಯ್ಯ, ಮುಖ್ಯ ಇಂಜಿನಿಯರ್ ಸಿ.ಎನ್ ಜ್ಯೋತಿ ಲಕ್ಷ್ಮಿ, ಎಜಿಎಂ ರಮೇಶ್ ಅವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವರು ಎಂದರು.
ಸಮಾಜದ ನಿವೃತ್ತ ನೌಕರರನ್ನು ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಕೇಂದ್ರ ಪರಿಹಾರ ಸಮಿತಿ  ಮಾಜಿ ಅಧ್ಯಕ್ಷ  ಎ.‌ಮಾನಯ್ಯ ಮತ್ತು ಸಿಎಂಎಸ್ ಮಾಜಿ ರಾಜ್ಯಾಧ್ಯಕ್ಷ ಹೆಚ್.ಕೆ ಬಸವರಾಜ್ ಅವರು ಸತ್ಕರಿಸಿ ಗೌರವಿಸುವರು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ
ಗೂಳೆಪ್ಪ ಬೆಳ್ಳೇಕಟ್ಟೆ ಅವರು ವಹಿಸುವರು.
ಮುಖ್ಯ ಅತಿಥಿಗಳಾಗಿ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ಮಾಜಿ ನಿರ್ದೇಶಕ ಡಾ. ಸಿ.‌ಭರತ್,
ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ, ಡಾ. ಅಂಬೇಡ್ಕರ್ ವಾದಿ ಡಾ. ಚಿನ್ನಸ್ವಾಮಿ ಸೋಸಲೆ, ಸಿಎಂಎಸ್ ದಾವಣಗೆರೆ ಜಿಲ್ಲಾಧ್ಯಕ್ಷರೂ ಆಗಿರುವ ನಿವೃತ್ತ ಎಸ್.ಪಿ ಎನ್.‌ರುದ್ರಮುನಿ, ಬಳ್ಳಾರಿ ಜಿಲ್ಲಾ ನಿವೃತ್ತ ಅಡಿಷನಲ್ ಎಸ್ಪಿ ಶಿವಣ್ಣ ಪಿ. ತಾವರಗಿ, ನಗರ ಡಿ.ವೈಎಸ್.ಪಿ ಗೋವಿಂದರಾಜು, ಕರ್ನಾಟಕ ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಸಿ.‌ನರಸಪ್ಪ, ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಮೇಯರ್ ತ್ರಿವೇಣಿ ಡಿ.‌ಸೂರಿ, ಸಿಎಂಎಸ್ ಮಾಜಿ ಅದ್ಯಕ್ಷ ಡಿ.‌ಸೂರಿ, ನಿವೃತ್ತ ಪಿಡಬ್ಯುಡಿ  ಇಂಜಿನಿಯರ್ ಸಂಗನಕಲ್ಲು ವೆಂಕಟರಮಣ, ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ,  ಕಲಬುರಗಿ ನಿವೃತ್ತ ಜಿಲ್ಲಾ ಖಜಾನಾಧಿಕಾರಿ ಸಿ.‌ವಿರೂಪಾಕ್ಷಪ್ಪ, ಛಲವಾದಿ ಸಮಾಜದ ಮುಖಂಡರಾದ ಟಿ.‌ಸುಂಕಪ್ಪ, ಎಂ. ಸಿ ಮಾಯಪ್ಪ, ಎಸಿ ದಾನಪ್ಪ, ನಾಗಲಕೆರೆ ಗೋವಿಂದ, ಜೆ.ಎಸ್. ಶ್ರೀನಿವಾಸಲು, ಸಂಗನಕಲ್ಲು  ವೆಂಕೋಬಿ, ಪಾಲಿಕೆ ಸದಸ್ಯೆ ಶಿಲ್ಪಾ, ಕಂಪ್ಲಿ ಪುರಸಭೆ ಸದಸ್ಯ ಸಿ. ಆರ್ ಹನುಮಂತ, ಸಿಎಂಎಸ್ ಜಿಲ್ಲಾಧ್ಯಕ್ಷ ಸಿ. ಶಿವಕುಮಾರ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಸಂಗನಕಲ್ಲು ವಿಜಯಕುಮಾರ್,  ಯುವ ಮುಖಂಡ ಕಪ್ಪಗಲ್ಲು ಓಂಕಾರಪ್ಪ, ಸಿಎಂಎಸ್ ವಿಜಯನಗರ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಬಣ್ಣದಮನೆ, ಸಿ. ಕೆಂಚಪ್ಪ, ಅಖಂಡ ಬಳ್ಳಾರಿ ಜಿಲ್ಲೆಯ ಛಲವಾದಿ ಸಮಾಜದ ಮುಖಂಡರಾದ ಕುರುವಳ್ಳಿ ಮಾರುತಿ, ಶಂಕರಪ್ಪ, ಸುರೇಶ್, ಹರಿದಾಸಪ್ಪ, ಕಮಲಾಪುರ ಸಣ್ಣ ಈರಪ್ಪ, ಕೂಡ್ಲಿಗಿ ಟಿ. ಉಮೇಶ್, ದೀಕ್ಷಾ ಶಂಕರ್, ಅಜ್ಜಯ್ಯ ಹೊಟ್ಟೇರ್, ನ್ಯಾಯವಾದಿ ಸೋಮು, ಸಿರುಗುಪ್ಪ ಗಣೇಶ್, ಸಂಡೂರಿನ ಸಿ.ಕೆ.‌ಅಶೋಕ್, ಕಂಪ್ಲಿ ಸಿ. ಚನ್ನಬಸಪ್ಪ, ಹಗರಿಬೊಮ್ಮನಹಳ್ಳಿ ಕಾಳೆ ಬಸವರಾಜ್, ಹೂವಿನ‌ಹಡಗಲಿ ದ್ಯಾಮಪ್ಪ,  ವೈದ್ಯಾಧಿಕಾರಿ ಡಾ. ಶಿವಕುಮಾರ್ ಅರಕೇರಿ,  ಸಂಘದ ಗೌರವ ಸಲಹೆಗಾರ ಹನುಮಂತಪ್ಪ, ಪಿಎಸ್ಐ ಸಿ.‌ಪ್ರಕಾಶ್,  ಕೊಳಗಲ್ಲು ಮಲ್ಲಯ್ಯ, ಜೆ. ಸಿ ಈರಣ್ಣ ಹೊಸಪೇಟೆ, ಕೆ.‌ಯೋಗರಾಜ್, ಹನಮೇಶ್ ಕಟ್ಟೆಮನಿ ಮತ್ತಿತರ ಗಣ್ಯರು ಉಪಸ್ಥಿತರಿರುವರು ಎಂದರು.
ಚಿಗುರು ಕಲಾ ತಂಡದ ಅಧ್ಯಕ್ಷ ಎಸ್.ಎಂ.‌ಹುಲುಗಪ್ಪ ಮತ್ತು ತಂಡದವರು ಬುದ್ಧ ಬೀಮ ಗೀತೆಗಳನ್ನು ಹಾಡುವರು. ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಹನುಮಪ್ಪ ಸ್ವಾಗತಿಸುವರು. ಪ್ರಧಾನ ಕಾರ್ಯದರ್ಶಿ ರಮೇಶ್ ಸುಗ್ನಳ್ಳಿ ನಿರ್ವಹಿಸುವರು. ಕಾರ್ಯಾಧ್ಯಕ್ಷ ಸಿ.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡುವರು. ಪ್ರತಿಭಾ ಪುರಸ್ಕಾರ ಜವಾಬ್ದಾರಿಯನ್ನು ಸಂಘದ ಉಪಾಧ್ಯಕ್ಷ ಪ್ರೊ. ಎ.ಎಸ್.‌ಬಸವರಾಜ್ ಅವರು ನಿರ್ವಹಿಸುವರು. ಭೀಮರಾವ್ ಐಎಎಸ್ ಕೆಎಎಸ್ ಸ್ಟಡಿ ಸರ್ಕಲ್ ನ ನಿರ್ದೇಶಕ ಶೇಖರ್ ಕುರುವಳ್ಳಿ ಅವರು ವಂದಿಸುವರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷರೂ ಆಗಿರುವ ಹಿರಿಯಪತ್ರಕರ್ತ ಸಿ .‌ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಿ. ಹನುಮಪ್ಪ, ಕರ್ನಾಟಕ ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಸಿ.ನರಸಪ್ಪ, ಜಿಲ್ಲಾಧ್ಯಕ್ಷ ಜೆ ಎಸ್ ಶ್ರೀನಿವಾಸುಲು, ಸಮಾಜದ ಮುಖಂಡರಾದ ಶಂಕರ ನಂದಿಹಾಳ್,  ವಿಲಾಸ ಅ ಮಾನಕರ, ಹನುಮೇಶ ಕಟ್ಟಿಮನೆ ಮತ್ತಿತರರು ಉಪಸ್ಥಿತರಿದ್ದರು.
—–

Leave a Reply

Your email address will not be published. Required fields are marked *