ಕಡಲ ತಡಿಯ ಕವನಗಳು.
೧.
ಸದ್ದಿಲ್ಲದೇ ಮುಳುಗುತಿತ್ತು
ಇಳಿಸಂಜೆಯ ಹೊತ್ತು ,
ಹೃದಯದ ತುಂಬಾ ಅಲೆ ಅಲೆಯಾಗಿ
ನಿನ್ನ ನೆನಪೇ ಆವರಿಸಿತ್ತು!
೨.
ನಿನ್ನ ನೆನಪಲಿ ಕಳೆದ ಕಡಲತೀರ ಸಂಜೆ…
ನೀಡಿತ್ತು ನನಗೆ ಕಾಲವನೇ ಮರೆಯುವ ತೀರದ ಸಜೆ!!
೩.
ಉಕ್ಕೇರಿದ ಕಡಲಲೆಗಳಿಗೆ ಗೊತ್ತು..
ನಾ ನಿನ್ನ ನೆನಪಲಿ ಇರುವ ಮತ್ತು!!
ನನ್ನ ಪರಕಾಯ ನೋಡಿ
ನೀಡುವವು ಅಲೆಗಳು ತಿರುತಿರುಗಿ ನಲ್ಮೆಯಲಿ ಮುತ್ತು!!
೪.
ಕಡಲತಡಿಯಲಿ ಬರೆದ ಹೆಸರೇನೋ..
ಅಲೆಗುಳಬ್ಬರಕೆ ಅಳಿಸಿರಬಹುದು ಒಲವೇ..
ಈ ಮನದ ಭಿತ್ತಿಯಲಿ ಕೆತ್ತಿದ ನಿನ್ಹೆಸರು
ಯಾವ ಭಾವ ಸುನಾಮಿಗೂ ಅಳಿಸಲಾಗಲಿಲ್ಲ ನೋಡು!!
೫
ನಿನ್ನ ನೆನಪಿನ ಅಲೆಗಳಲಿ
ಇಹವನೇ ಮರೆತ ಮೈಮನ…
ರಚಿಸಿದವು ಅಂದದಿ ಅಶುಕವನ..
ಅದಕೆಲ್ಲ ಕಾರಣ…ಅಲೆಗಳಾಗಿ ನನ್ನ ಸ್ಪರ್ಶಿಸಿದ
ನಿನ್ನೊಲವಿನ ಚಂದದ ಕಲ್ಪನಾಯಾನ!
ಇಂತಿ ನಿನ್ನೊಲವು.

-ಶಾಂತಾ ಪಾಟೀಲ್, ಸಿಂಧನೂರು
