ಕಲೆ ಸಂಸ್ಕೃತಿ ಗ್ರಾಮೀಣ ಜನರ ಜೀವಾಳ – ಬಿ.ನಾಗರಾಜ್

ಬಳ್ಳಾರಿ, ಮೇ 26:  ಕಲೆ ಸಂಸ್ಕೃತಿ ಗ್ರಾಮೀಣ ಜನರ ಜೀವಾಳವಾಗಿದ್ದು,  ದೇಸಿ ಸೊಗಡನ್ನು ನವಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು
ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಹೇಳಿದರು.
ಶ್ರೀಮಹಾ ದೇವತಾತ ಕಲಾ ಸಂಘ, ಹಂದ್ಯಾಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ
ಸಂಯುಕ್ರಾಶ್ರಯದಲ್ಲಿ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದ ಗ್ರಾಮೀಣ ಸಾಂಸ್ಕೃತಿಕ ಸಂಭ್ರಮ- 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಸಾಂಸ್ಕೃತಿಕ ಕಾರ್ಯಕ್ರಮಗಳು ಹಳ್ಳಿಯಲ್ಲಿ ಜನರ ಭಾವನೆ ಜನಜೀವನದ ಭಾಗವಾಗಿವೆ
ಮಠ ಮಾನ್ಯಗಳಲ್ಲಿ ಪರಂಪರೆ ಸಾರ್ವಜನಿಕರಲ್ಲಿ ಸಾಂಸ್ಕ್ರತಿಕ ಮನೋಭಾವ ಮೂಡಲು ಈ ರೀತಿಯ ಕಾರ್ಯಕ್ರಮ ಸಹಕಾರ ಆಗುತ್ತದೆ. ಈ ನಿಟ್ಟಿನಲ್ಲಿ ಶ್ರೀಮಹಾದೇವ ತಾತ ಕಲಾ ಸಂಘವು ಎರಡು ಮೂರು ದಶಕಗಳಿಂದ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಕಲಾ ಪ್ರಕಾರ ಹಮ್ಮಿಕೊಂಡು ಬಂದಿರೋದು ವಿಶೇಷವಾಗಿದೆ ಎಂದು ಶ್ಲಾಘಿಸಿದರು.


ಮುಖ್ಯ ಅತಿಥಿ  ಶ್ರೀ ಮರಿ ಕೊಟ್ಟೂರು ದೇಶಿಕೇಂದ್ರ
ಸ್ವಾಮೀಜಿ ಅವರು ಮಾತನಾಡಿ ಗ್ರಾಮೀಣ ಪ್ರತಿಭೆಗಳನ್ನು ಹೊರ ತರುವಲ್ಲಿ ಮಹಾದೇವ ತಾತಾ ಕಲಾ ಸಂಘ ನಿರಂತರ ಶ್ರಮವಹಿಸಿದೆ. ಈ ರೀತಿಯ ಕಾರ್ಯಕ್ರಮದಿಂದ ಜನರಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಮೂಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ  ಎ.ನಾಗೇಂದ್ರಪ್ಪ, ಅಖಿಲ ಭಾರತ ವೀರಶೈವ ಸಂಘ ತಾಲ್ಲೂಕು ಅಧ್ಯಕ್ಷರಾದ  ಎಸ್ .ಬಿ .ವೀರನಗೌಡ, ಗ್ರಾಮದ ಹಿರಿಯ ಮುಖಂಡರಾದ ಬರು ಘಂಟರ ಸಣ್ಣ ಪಂಪಣ್ಣ, ಭಜನೆ ಸಂಘದ ಹಿರಿಯ ಸದಸ್ಯರಾದ ಕಚೇಡು ಮಾರೆಪ್ಪ, ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಸ್ ಕೆ ಆರ್ ಜಿಲಾನಿ ಭಾಷ, ಶ್ರೀ ಭೀಮನೇನಿ ಪ್ರಸಾದ, ಶ್ರೀ ಜಿ. ಲಿಂಗಪ್ಪ, ಶ್ರೀ ನಿರಂಜನ, ಹಳ್ಳಿಮನೆದೊಡ್ಡ ಬಸಪ್ಪ ಉಪಸ್ಥಿತರಿದ್ದರು.        ಸಂಘದ ಅಧ್ಯಕ್ಷರಾದ ಪುರುಷೋತ್ತಮ ಹಂದ್ಯಾಳ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಸಾಯಿ ಶೃತಿ ವಂದಿಸಿದರು.


ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಡಿ ಪಂಪನಗೌಡ ಬಳ್ಳಾರಿ ತಂಡದಿಂದ ಭಜನೆ, ಶ್ರೀಮತಿ ಕವಿತ ಕೆ ಬಳ್ಳಾರಿ ತಂಡದಿಂದ ಸುಗಮ ಸಂಗೀತ, ಶ್ರೀಮತಿ ಎರ್ರೆಮ್ಮೆ ತಂಡದಿಂದ ರಂಗಗೀತೆ ಗಾಯನ,  ಎಸ್ ಕೆ ಆರ್ ಜಿಲಾನಿ ತಂಡ ಸಮೂಹಿಕ ನೃತ್ಯ ಮತ್ತು  ಗಣೇಶ ಕುಮಾರ್ ಬಿ ತಂಡದಿಂದ ಶರಣ ಸಂಗಮ ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು.

ಇದೇ ಸಂದರ್ಭದಲ್ಲಿ ಕಲಾ ಪ್ರಶಸ್ತಿ ಪುರಸ್ಕೃತರಾದ ಎಸ್ ಕೆ ಆರ್ ಜಿಲಾನಿ ಭಾಷ ಮತ್ತು ಗಾಯಕ ದೊಡ್ಡಬಸಪ್ಪ ಗವಾಯಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮಾಡಲಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗೊಳಿಸಿದರು.

Leave a Reply

Your email address will not be published. Required fields are marked *