
ಬಳ್ಳಾರಿ, ಮೇ 29: ಕೊಳ್ಳೇಗಾಲದ ಹಿರಿಯ ಶಾಸಕ ಎ.ಆರ್ ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಭೀಮಮಾರ್ಗ ಒತ್ತಾಯಿಸಿದೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸಮಿತಿ ಜಿಲ್ಲಾ ಸಂಚಾಲಕ ಗಾದಿಲಿಂಗಪ್ಪ ಒತ್ತಾಯಿಸಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಹೆಸರು ಮಾಡಿರುವ ಮಾಜಿ ರಾಜ್ಯಪಾಲ ಬಿ. ರಾಚಯ್ಯ ಅವರ ಪುತ್ರರಾಗಿರುವ ಎ ಆರ್ ಕೃಷ್ಣಮೂರ್ತಿ ಅವರು ತಮ್ಮ ನಾಯಕತ್ವದಲ್ಲಿ 1,08,363 ಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ. ಮೀಸಲು ಕ್ಷೇತ್ರಗಳಲ್ಲಿಯೇ ಹೆಚ್ಚಿನ ಅಂತರದಿಂದ 59,519 ಮತಗಳನ್ನು ಪಡೆದು ದಾಖಲೆ ನಿರ್ಮಾಣ ಮಾಡಿದ್ದಾರೆ.

ಎ.ಆರ್ ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನಮಾನ ನೀಡಿ ಬಿ.ರಾಚಯ್ಯ ನವರು ಮಾಡಿರುವ ಕೆಲಸವನ್ನು ಮುಂದುವರೆಸಲು ಹಾಗೂ ತಮ್ಮ ನಾಯಕತ್ವದಲ್ಲಿ ನಿಮ್ಮ ಜೊತೆಗೂಡಿ ಹಿಂದುಳಿದ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಗೆ ಮತ್ತು ರಾಜ್ಯದಲ್ಲಿ ಕೆಲಸ ಮಾಡಲು ಸಚಿವ ಸ್ಥಾನಮಾನ ನೀಡಬೇಕು ಎಂದು ಗಾದಿಲಿಂಗಪ್ಪ ಡಿಕೆ ಶಿವಕುಮಾರ್ ಅವರನ್ನು ಕೋರಿದ್ದಾರೆ.
—–
