ಕುಡಿತಿನಿ ತಲುಪಿದ ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆ

ಬಳ್ಳಾರಿ, ಸೆ.8: ಜಿಲ್ಲೆಯ  ಹಳೇ ದರೋಜಿಯಿಂದ  ಸಾಗಿದ ಬಿಜೆಪಿ 8ನೇ ದಿನದ “ಬಳ್ಳಾರಿ ಚಲೋ”  ಪಾದಯಾತ್ರೆ ಮಂಗಳವಾರ ಸಂಜೆ ತಾಲೂಕಿನ  ಕುಡುತಿನಿ ತಲುಪಿತು.

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್.‌ ಅಶ್ವತ್ಥ್‌ ನಾರಾಯಣ್‌, ಮಾಜಿ ಸಚಿವರಾದ  ಬಿ. ಶ್ರೀರಾಮುಲು,  ಸಿ. ಟಿ. ರವಿ,  ಎಂ. ಪಿ. ರೇಣುಕಾಚಾರ್ಯ,  ಶಾಸಕರಾದ  ಹರೀಶ್‌ ಪೂಂಜ,  ರವಿ ಸುಬ್ರಹ್ಮಣ್ಯ,  ಎಂ. ಚಂದ್ರಪ್ಪ, ಬಾಲಚಂದ್ರ ಜಾರಕಿಹೊಳಿ, ವಿಧಾನಪರಿಷತ್‌ ಸದಸ್ಯರಾದ  ರಘು ಕೌಟಿಲ್ಯ,  ಕಿಶೋರ್‌ ಕುಮಾರ್‌ ಪುತ್ತೂರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ನಂದೀಶ್‌ ರೆಡ್ಡಿ, ರಾಜ್ಯ ಉಪಾಧ್ಯಕ್ಷರಾದ  ಎನ್.‌ ಮಹೇಶ್‌,  ರಾಜು ಗೌಡ, ರಾಜ್ಯ ಕಾರ್ಯದರ್ಶಿಗಳಾದ  ಶರಣು ತಳ್ಳಿಕೇರಿ, ಲಲಿತಾ ಅನಪೂರ್, ಎಸ್. ಟಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ  ಬಂಗಾರು ಹನುಮಂತು, ಮಾಜಿ ಪರಿಷತ್ ಸದಸ್ಯರಾದ  ಮಹಾಂತೇಶ ಕವಟಗಿಮಠ ಸೇರಿದಂತೆ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸಂಜೆ ಕುಡಿತಿನಿ ಗ್ರಾಮದ ಶ್ರೀ ದೊಡ್ಡ ಆಂಜನೇಯ ದೇವಸ್ಥಾನ ಸಮೀಪದ ಆವರಣದಲ್ಲಿ  ಜರುಗಿದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ಬಿವೈ ವಿಜಯೇಂದ್ರ, ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

——

Leave a Reply

Your email address will not be published. Required fields are marked *