
ಬಳ್ಳಾರಿ, ಸೆ.17: ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಬುಧವಾರ ನಗರದ ವಿವಿಧ ವಾರ್ಡ್’ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 14ರ ವ್ಯಾಪ್ತಿಯ ರಾಜ್ಯೋತ್ಸವ ನಗರ, ಎಲ್ಲಮ್ಮ ಕಟ್ಟೆ, ಮಿಲ್ಲರ್ ಪೇಟೆ, ಬಡಾ ಗಲ್ಲಿಯ ಲಿಂಕ್ ರಸ್ತೆಗಳಲ್ಲಿ ಯುಜಿಡಿ ಚರಂಡಿ ಹಾಗೂ ಸಿಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ (ಅಂದಾಜು ಮೊತ್ತ 1.50 ಕೋಟಿ ರೂ.ಗಳು) ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಬಿಆರೆಲ್ ಸೀನಾ, ಮಹಾನಗರ ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಸೀನಾ, ಜಿಲಾನ್, ರಾಮು, ರಸೂಲ್, ರವಿ ಮತ್ತಿತರರು ಹಾಜರಿದ್ದರು.
ಅದೇ ರೀತಿ ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 14ರ ವ್ಯಾಪ್ತಿಯ ರಾಜ್ಯೋತ್ಸವ ನಗರ, ಗಡ್ಡೆ ಕೆಳಗೆ, ಲಿಂಕ್ ರಸ್ತೆಗಳಲ್ಲಿ ಯುಜಿಡಿ ಚರಂಡಿ ಹಾಗೂ ಸಿಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ (ಅಂದಾಜು ಮೊತ್ತ 1.20 ಕೋಟಿ ರೂ.ಗಳು) ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಬಿಆರೆಲ್ ಸೀನಾ, ಮಹಾನಗರ ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಸೀನಾ, ಜಿಲಾನ್, ರಾಮು, ರಸೂಲ್, ರವಿ ಮತ್ತಿತರರು ಹಾಜರಿದ್ದರು.
ತದನಂತರ ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 13ರ ವ್ಯಾಪ್ತಿಯ ಗಣೇಶ ಗುಡಿಯಿಂದ ನಾರಪ್ಪ ಬೀದಿವರೆಗೆ ಮತ್ತು ಕೋರ್ಟ್ ಮೊಹಲ್ಲಾ ರಸ್ತೆ ಎದುರುಗಡೆ ಒಳ ಚರಂಡಿ ಹಾಗೂ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ (ಅಂದಾಜು ಮೊತ್ತ 2 ಕೋಟಿ ರೂ.ಗಳು) ಪೂಜೆ ಸಲ್ಲಿಸುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಾರ್ಡಿನ ಪಾಲಿಕೆಯ ಸದಸ್ಯ ಇಬ್ರಾಹಿಂ ಬಾಬು, ಬಿಆರೆಲ್ ಸೀನಾ, ಮಹಾನಗರ ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಸ್ಥಳೀಯ ಮುಖಂಡರಾದ ಥಿಯೇಟರ್ ಶಿವು, ಕಪ್ಪೆ ಶಿವು, ರಘು, ಪಿ.ರಸೂಲ್, ಪ್ರದೀಪ್, ಸುರೇಶ್, ಕವಿತಾ, ಚಂದ್ರ, ಇಮ್ರಾನ್, ಅಬ್ದುಲ್ ಬಾರಿ, ತಬ್ರೇಜ್ ಮತ್ತಿತರರು ಇದ್ದರು.
