ಅನುದಿನ ಕವನ-೧೯೭೫, ಹಿರಿಯ ಕವಿ: ಡಾ. ಸಿದ್ದರಾಮ ಹೊನ್ಕಲ್, ಶಹಪುರ, ಕವನದ ಶೀರ್ಷಿಕೆ: ಹುಚ್ಚರು ! (ಒಂದು ಗಜಲ್)

ಹುಚ್ಚರು !                                                          (ಒಂದು ಗಜಲ್)

ಈ ಕರಾಳ ಕತ್ತಲೆಯಲ್ಲಿ ಬೆಳಕಿನ ಕಿರಣ ಕಾಣ ಬಯಸಿದವರು ಹುಚ್ಚರು ಇಲ್ಲಿ
ಯಾರೇ ಹೀಗೆ ಹೊಸತು ಹಂಬಲಿಸಿದರು ಹುಚ್ಚರು ಇಲ್ಲಿ

ಈ ನೆಲದಲ್ಲಿ ಇಂತಹ ಅಪಾರ ಹುಚ್ಚ!ರಿಗೆ ಕೊರತೆಯಂತೂ ಇಲ್ಲ
ಕತ್ತಲೆ ಕಳೆದು ಹೊಸ ಬೆಳಕು ಮೂಡುವ ಭರವಸೆಯವರು ಹುಚ್ಚರು ಇಲ್ಲಿ

ಬೆಳಕ ಬಯಸಿದವರೆಲ್ಲ ಸುಟ್ಟು ಬೂದಿಯಾದರು ಇಲ್ಲಿ ನೆನಪಿರಲಿ
ಅಸ್ಥಿಪಂಜರ ಗಾಳಿಗುಂಟ ಹರಡಿ ಗಂಗೆ ಸೇರುವ ನಂಬಿಗೆಯವರು ಹುಚ್ಚರು ಇಲ್ಲಿ

ಅಂತಹ ಕನಸು ಮನಸಿಗರೆಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋಗಿಹರಿಲ್ಲಿ ಅದೇಕೋ
ಹಾಗಂತ ಗೊತ್ತಿದ್ದು ಸಹ ಕನಸು ಕಾಣುವ ಮನಸಿಗರು ಹುಚ್ಚರು ಇಲ್ಲಿ

“ಹೊನ್ನಸಿರಿ”ಅಸ್ಥಿಪಂಜರ ಬೂದಿಯಾಗಲೆಂದು ಹಂಬಲಿಸಿದ್ದುಂಟು ಇಲ್ಲಿ
ತಮ್ಮ ದೇಹದ ಬೂದಿಯೂ ಸಹ ಸೇರಲೆನ್ನುವ ನಿಜ ಮನುಷ್ಯರು ಹುಚ್ಚರು ಇಲ್ಲಿ

🌹-ಡಾ. ಸಿದ್ದರಾಮ ಹೊನ್ಕಲ್, ಶಹಪುರ

 

Leave a Reply

Your email address will not be published. Required fields are marked *