ಅನುದಿನ ಕವನ-೧೯೭೪, ಕವಿ(ಸಂಗ್ರಹ-ಅನುವಾದ): ಚಿದಂಬರ ನರೇಂದ್ರ, ಬೆಂಗಳೂರು

ನನ್ನ ಸಹನೆಯ ಪರಾಕಾಷ್ಠತೆಯ ಬಗ್ಗೆ
ಕೇಳುತ್ತೀಯಲ್ಲ ಫರಾಜ್ ,
ನನ್ನ ಅಪ್ಪಿಕೊಂಡು ಅತ್ತಳು ಆಕೆ
ಬೇರೆ ಇನ್ಯಾರದೋ ನೆನಪಿನಲ್ಲಿ.

*****

ನನ್ನ ಬಿಟ್ಟು ಹೋಗುವಾಗ
ಮುಂದೆ ಕನಸಲ್ಲಿ ಮಾತ್ರ ಭೇಟಿ ಎಂದಿದ್ದಳು ಅವಳು,
ಹಾಗೆಂದು ಪ್ರಮಾಣವನ್ನಾದರೂ ಮಾಡಬೇಕಿತ್ತು ಆಕೆ
ಮಾಡಿದ್ದರೆ, ಮಲಗಿ ಬಿಡುತ್ತಿದ್ದೆ ನಾನು ಜೀವನವಿಡೀ.

*****

ಹಕೀಕತ್ತು ಗೊತ್ತು ಮಾಡಿಕೊಂಡುಬಿಟ್ಟರೆ
ಬೇರೆಯವರಾಗಿ ಬಿಡುತ್ತಾರೆ ಎಲ್ಲರೂ,
ಇರಲು ಬಯಸುತ್ತೇನೆ ನಾನು
ಎಲ್ಲರೂ ನನ್ನವರೇ ಎನ್ನುವ ಭ್ರಮೆಯಲ್ಲಿ.


ಸಂಗ್ರಹ, ಅನುವಾದ : ಚಿದಂಬರ ನರೇಂದ್ರ, ಬೆಂಗಳೂರು

Leave a Reply

Your email address will not be published. Required fields are marked *