ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ 2026: ಬಳ್ಳಾರಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ, ಶೇಕಡಾ 86.50 ರಷ್ಟು ಮತದಾನ ದಾಖಲು

ಬಳ್ಳಾರಿ,ಅ.23: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಸಂಜೆ 4 ಗಂಟೆಯ ವೇಳೆಗೆ ಒಟ್ಟು 86.50 ರಷ್ಟು ದಾಖಲೆಯ ಮತದಾನವಾಗಿದೆ.
ಮತದಾರರ ವಿವರ ಹಾಗೂ ಅಂತಿಮ ಅಂಕಿ-ಅಂಶ:
ಒಟ್ಟು ನೋಂದಾಯಿತ ಮತದಾರರು: 3,393 (ಪುರುಷರು-1,814, ಮಹಿಳೆಯರು-1,579)
ಚಲಾವಣೆಯಾದ ಒಟ್ಟು ಮತಗಳು: 2,935
ಮತ ಚಲಾಯಿಸಿದ ಪುರುಷರು: 1,615 (ಶೇ.89.08)
ಮತ ಚಲಾಯಿಸಿದ ಮಹಿಳೆಯರು: 1,320 (ಶೇ.83.54)
ಹಂತ-ಹಂತವಾಗಿ ಏರಿಕೆಯಾದ ಮತದಾನದ ಪ್ರಮಾಣ:
ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಶಿಕ್ಷಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬಂತು.
ಬೆಳಿಗ್ಗೆ 10 ಗಂಟೆಗೆ- ಒಟ್ಟು 409 ಮತಗಳು (ಶೇ.12.05) ಚಲಾವಣೆಯಾಗಿದ್ದವು.
ಮಧ್ಯಾಹ್ನ 12 ಗಂಟೆಗೆ- ಮತದಾನದ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗಿ 1,453 ಮತಗಳು (ಶೇ.42.82) ದಾಖಲಾದವು.
ಮಧ್ಯಾಹ್ನ 02 ಗಂಟೆಗೆ- ಮತದಾನ ಪ್ರಮಾಣ 2,333 ಮತಗಳೊಂದಿಗೆ ಶೇ.68.76 ಕ್ಕೆ ತಲುಪಿತು.
ಸಂಜೆ 04 ಗಂಟೆಗೆ (ಅಂತಿಮ ಅವಧಿ)- ಒಟ್ಟು 2,935 ಮತಗಳು ಚಲಾವಣೆಯಾಗುವುದರೊಂದಿಗೆ ಮತದಾನವು ಶೇ.86.50 ತಲುಪಿ ಪೂರ್ಣಗೊಂಡಿತು.
ಮತಗಟ್ಟೆವಾರು ಮತದಾನದ ವಿವರ:
ನೂತನ ಜಿಲ್ಲಾಡಳಿತ ಭವನದ ಬಳ್ಳಾರಿ ತಾಲ್ಲೂಕು ಕಚೇರಿ(ಭಾಗ-1): ಒಟ್ಟು 939 ಮತದಾರರಲ್ಲಿ 791 ಮಂದಿ (393 ಪುರುಷರು, 398 ಮಹಿಳೆಯರು) ಮತದಾನ ಮಾಡಿದ್ದಾರೆ.
ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ಕೊಠಡಿ ಸಂ.1(ಭಾಗ-2): ಒಟ್ಟು 700 ಮತದಾರರಲ್ಲಿ 590 ಮತಗಳು (316 ಪುರುಷರು, 274 ಮಹಿಳೆಯರು) ಚಲಾವಣೆಯಾಗಿವೆ.
ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ಕೊಠಡಿ ಸಂ. 3 (ಭಾಗ-2ಎ): 564 ಮತದಾರರ ಪೈಕಿ 471 ಮಂದಿ (214 ಪುರುಷರು, 257 ಮಹಿಳೆಯರು) ಹಕ್ಕು ಚಲಾಯಿಸಿದ್ದಾರೆ.
ಕಂಪ್ಲಿ ಪುರಸಭೆ ಕಚೇರಿ (ಭಾಗ-3): ಒಟ್ಟು 216 ಮತದಾರರಲ್ಲಿ 204 ಮತಗಳು (133 ಪುರುಷರು, 71 ಮಹಿಳೆಯರು) ದಾಖಲಾಗಿವೆ.
ಕುರುಗೋಡು ತಾಲ್ಲೂಕು ಕಚೇರಿ (ಭಾಗ-4): ಒಟ್ಟು 120 ಮತದಾರರಲ್ಲಿ 110 ಮಂದಿ (85 ಪುರುಷರು, 25 ಮಹಿಳೆಯರು) ಮತ ಚಲಾಯಿಸಿದ್ದಾರೆ.
ಸಂಡೂರು ತಾಲ್ಲೂಕು ಕಚೇರಿ (ಭಾಗ-5): ಒಟ್ಟು 387 ಮತದಾರರಲ್ಲಿ 344 ಮಂದಿ (186 ಪುರುಷರು, 158 ಮಹಿಳೆಯರು) ಮತದಾನ ಮಾಡಿದ್ದಾರೆ.
ಸಿರುಗುಪ್ಪ ತಾಲ್ಲೂಕು ಕಚೇರಿ (ಭಾಗ-6): ಒಟ್ಟು 313 ಮತದಾರರ ಪೈಕಿ 281 ಮಂದಿ (167 ಪುರುಷರು, 114 ಮಹಿಳೆಯರು) ಮತದಾನದಲ್ಲಿ ಪಾಲ್ಗೊಂಡಿದ್ದಾರೆ.
ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಕಚೇರಿ (ಭಾಗ-7): ಒಟ್ಟು 96 ಮತದಾರರಲ್ಲಿ 87 ಮತಗಳು (66 ಪುರುಷರು, 21 ಮಹಿಳೆಯರು) ಚಲಾವಣೆಯಾಗಿವೆ.
ಕರೂರು ನಾಡ ಕಚೇರಿ (ಭಾಗ-8): ಒಟ್ಟು 58 ಮತದಾರರಲ್ಲಿ 57 ಮತಗಳು (55 ಪುರುಷರು, 2 ಮಹಿಳೆಯರು) ಚಲಾವಣೆಯಾಗಿದ್ದು, ಇಲ್ಲಿ ಶೇಕಡಾ 98 ಕ್ಕೂ ಅಧಿಕ ಅತಿ ಹೆಚ್ಚು ಮತದಾನ ದಾಖಲಾಗಿದೆ.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ

ಒಟ್ಟಾರೆಯಾಗಿ ಜಿಲ್ಲೆಯ ಎಲ್ಲ ಒಂಬತ್ತು ಮತಗಟ್ಟೆಗಳಲ್ಲಿ ಶಿಕ್ಷಕ ಮತದಾರರು ಉತ್ಸಾಹದಿಂದ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
——–

Leave a Reply

Your email address will not be published. Required fields are marked *