ಅನುದಿನ ಕವನ-೨೮೫, ಕವಯತ್ರಿ: ಲಕ್ಷ್ಮಿ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ: ನನ್ನ ಜೀವದ ಹೂವೇ…..

ನನ್ನ ಜೀವದ ಹೂವೇ

ನನ್ನ ಜೀವದ ಹೂವೇ
ನನ್ನನ್ನೂ ಹೂವಾಗಿಸಿದ್ಧಕ್ಕೆ
ಕೃತಜ್ಞತೆ ಸಲ್ಲಿಸುತ್ತೇನೆ ನಿನಗೆ

ಬದುಕಿನಲ್ಲಿ ನಾನು
ಭ್ರಮರಾಲೋಕದಲ್ಲಿ ಮುಳುಗಿ
ಎಚ್ಚೆತ್ತುಕೊಂಡಾಗ
ನನ್ನ ಕಣ್ಗೆ ಗೋಚರವಾದದ್ದು
ನಿನ್ನ ಹೂವು

ಹೂವ ಬದುಕು ನನಗೆ
ಹಾಸಿ ಆಸರೆಯಾದಾಗ
ನಿನ್ನ ಹಾಡುಗಳು ಮನಸ್ಸಿಗೆ
ಇಂಪು ಮೂಡಿಸಿ
ನನ್ನ ಬಾಳಲ್ಲಿ ನಲಿವೆನಿಸಿದವು

ನನ್ನ ಪುಟ್ಟ ಹೃದಯವನ್ನು
ನೀನು ಕಾಪಾಡಿದ್ದೀಯಾ
ಕೈ ಮುಗಿಯುವೆ ನಿನಗೆ
ಈ ನನ್ನ ಕೈಗಳು ಸೋತಾಗ
ನೀನು ಶಕ್ತಿ ನೀಡುವಿಯೆಂದು
ಪ್ರೀತಿ ನಂಬಿಕೆ ಇಟ್ಟುಕೊಂಡಿದ್ದೇನೆ
ನನ್ನ ಜೀವ ಪಾತ್ರದ ಹೂವೇ
ನಿನಗೆ ವಂದನೆಗಳು

-ಲಕ್ಷ್ಮಿ ಮುದೇನೂರು, ಧಾರವಾಡ


*****

Leave a Reply

Your email address will not be published. Required fields are marked *