ಅನುದಿನ ಕವನ-೧೮೦೭, ಕವಯತ್ರಿ: ಗಾಯತ್ರಿ ಬಿ, ಜಿಂದಾಲ್-ತೋರಣಗಲ್ಲು, ಕವನದ ಶೀರ್ಷಿಕೆ: ಗುಲಾಬಿ ಪಕಳೆ
ಗುಲಾಬಿ ಪಕಳೆ ಚಂದಿರನ ವದನದಲಿ ನೀರೆಯ ಮೌನ ಕಾಲ್ಗೆಜ್ಜೆ ನಾದದಲಿ ಮುಗುಳ್ನಗೆಯ ಬಾಣ. ವನಸಿರಿಯ ಹಸಿರಲಿ ಹೊದಿಕೆಯುಟ್ಟ ನಾರಿ ಸೆರಗಲಿ ಲಜ್ಜೆಯ ಮುಚ್ಚಿಟ್ಟ ಪೋರಿ. ಬಳುಕುವ ಬಳ್ಳಿಯ ಮಾಟದ ಬೆಡಗಿ ಸಿಂಗಾರದ ತೋಟದಲಿ ವೈಯ್ಯಾರದ ಹುಡುಗಿ. ಭೂರಮೆಯ ಸಿಂಗಾರ ಹಣೆಯಲ್ಲಿ ಸಿಂಧೂರ…
