ವೆಂಕಟಸಿಂಗ್ ಗೆ ತಾಯಿ ವಿಯೋಗ

ರಾಯಚೂರು, ಡಿ.11: ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ವೆಂಕಟಸಿಂಗ್ ಅವರ ತಾಯಿ ಯಮುನಾಬಾಯಿ (80) ಅವರು ಕಲಬುರ್ಗಿ ಜಯದೇವ ಆಸ್ಪತ್ರೆಯಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ.
ಶ್ರೀಮತಿ ಯಮುನಾಬಾಯಿ ಅವರ ನಿಧನಕ್ಕೆ ಕೆಯುಡಬ್ಕ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ , ಹಿರಿಯ ಪತ್ರಕರ್ತ ಸಿ.ಮಂಜುನಾಥ ಸಂತಾಪ ವ್ಯಕ್ತಪಡಿಸಿದ್ದಾರೆ.