ನಿಯತ್ತು…
ನೋಡುತ್ತೇನೆ
ಪ್ರತಿ ಮುಂಜಾವು
ದೂರದಲ್ಲಿನ ಬೆಟ್ಟ ಸಾಲು,
ಸುತ್ತಲಿನ ಮರ ಗಿಡ, ಪಶು, ಪಕ್ಷಿ,
ಎಂತಹ ದಿವ್ಯ ಮೌನ ಅವುಗಳಲ್ಲಿ…
ಒಂದು ಮುಂಜಾನೆ
ವಾಕಿಂಗ್ ನಲ್ಲಿ ಎದುರು ಸಿಕ್ಕಿತೊಂದು
ಬೀದಿ ಬದಿಯಲ್ಲಿ ನಾಯಿ ಮರಿ
ಮೌನದಲಿ ಬಾಲ ಅಲ್ಲಾಡಿಸುತ್ತ,
ಬಾಯಿ ತೆರೆದು ನಾಲಿಗೆ ಹೊರ ಚಾಚಿ,
ತೋರುತ್ತಿತ್ತು ಕಣ್ಣಲ್ಲಿ ಪ್ರೀತಿ
ನಿಯತ್ತು ಮೈ ತುಂಬಿಕೊಂಡಂತೆ…
ಅದರ ಕಣ್ಣಲ್ಲಿ ನಾನು
ನನ್ನ ಕಣ್ಣಲ್ಲಿ ಅದು ಹೀಗೆ
ಪರಸ್ಪರ ನೋಡುತಿರಲು
ಕೆಣಕುತ್ತಿತ್ತು ನನ್ನೊಳಗಿನ ನಿಯತ್ತು… !

◆ವೈ ಬಿ ಹಾಲಬಾವಿ, ರಾಯಚೂರು
