23ನೇ ರಾಗರಂಗ ಮಾಸಿಕ ಸಂಗೀತ ಕಾರ್ಯಕ್ರಮ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡುರಂಗಪ್ಪರಿಗೆ ಸನ್ಮಾನ

ಬಳ್ಳಾರಿ, ನ.13:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡುರಂಗಪ್ಪ ಅವರನ್ನು ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ವತಿಯಿಂದ ಭಾನುವಾರ
ನಗರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇಲ್ಲಿನ ಸಿರುಗುಪ್ಪ ರಸ್ತೆಯ ಹವಂ ಬಾವಿ ಗಾನಯೋಗಿ ಕಲಾ ಕೇಂದ್ರದಲ್ಲಿ 23ನೇ ರಾಗರಂಗ ಮಾಸಿಕ ಸಂಗೀತ ಕಾರ್ಯಕ್ರಮದಲ್ಲಿ ಪಾಂಡುರಂಗಪ್ಪ ಅವರನ್ನು ಸತ್ಕರಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೊಲೀಸ್ ಜಿಮ್ ಖಾನ್ ಟೇಬಲ್ ಟೆನ್ನಿಸ್ ತರಬೇತುದಾರರಾದ ಶಿವಾನಂದ ಕಥಕನಹಳ್ಳಿ ಮತ್ತು ಸಂಗೀತ ಶಿಕ್ಷಕ ದೊಡ್ಡ ಬಸವ ಗವಾಯಿ ಡಿ ಕಗ್ಗಲ್, ಅಂಗವಿಕಲ ಮುಖಂಡರಾದ ಕುಮಾರ್ ಬೇವಿನಹಳ್ಳಿ ಹಾಗೂ ವೀರೇಶ್ ಸ್ವಾಮಿ ತೆಕ್ಕಲಕೋಟೆ ಮತ್ತು ಕಲಾವಿದರಾದ ಎರೇಗೌಡ ಗಣಿಕೆ ಹಾಳ್ , ಸುಧಾಕರ, ಸಂತೋಷ್ ಕುಮಾರ್ ಭಾಗವಹಿಸಿದ್ದರು.

ಬಳಿಕ ವಿವಿಧ ಕಲಾವಿದರಿಂದ ರಾಗರಂಗ ಮಾಸಿಕ
ಸಂಗೀತ ಕಾರ್ಯಕ್ರಮ ನಡೆಯಿತು.
*****

Leave a Reply

Your email address will not be published. Required fields are marked *