ಎನ್.ಎಂ.ಎಂ.ಎಸ್ ಪರೀಕ್ಷೆ ಕೇಂದ್ರ ಕೆಪಿಎಸ್ ಬಾಲಕಿಯರ ಕಾಲೇಜಿಗೆ ಸ್ಥಳಾಂತರ -ಬಿಇಓ‌ ಕೆಂಪಯ್ಯ

ಬಳ್ಳಾರಿ, ಜ.19: ನಗರದ ಎನ್.ಎಂ.ಎಂ.ಎಸ್ (ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿ ವೇತನ ಯೋಜನೆ) ಪರೀಕ್ಷಾ ಕೇಂದ್ರವನ್ನು ನಗರದ ವಾರ್ಡ್ಲಾ ಶಾಲಾ ಕೇಂದ್ರದಿಂದ ಸ್ಥಳೀಯ ಡಿಸಿ ಕಚೇರಿ ಬಳಿ ಇರುವ ಕೆಪಿಎಸ್ ಬಾಲಕಿಯರ ಕಾಲೇಜು ಕೇಂದ್ರಕ್ಕೆ ಬದಲಾಯಿಸಲಾಗಿದೆ ಎಂದು ಪೂರ್ವ ವಲಯದ ಬಿಇಓ ಕೆಂಪಯ್ಯ ಅವರು ತಿಳಿಸಿದ್ದಾರೆ.


ಈ ಕುರಿತು ಪ್ರಕಟಣೆ ನೀಡಿರುವ ಅವರು ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿ  ವೇತನ ಯೋಜನೆ ಪರೀಕ್ಷೆ ನಗರದ ಕೆಪಿಎಸ್ ಬಾಲಕಿಯರ ಕಾಲೇಜಿನ ಕೇಂದ್ರ -2 ರಲ್ಲಿ ನಡೆಯಲಿದ್ದು,ಎಲ್ಲಾ ವಾರ್ಡ್ಲಾ ಕೇಂದ್ರಕ್ಕೆ ಬಂದಿರುವ ಮಕ್ಕಳನ್ನು ಕಡ್ಡಾಯವಾಗಿ ಕೆಪಿಎಸ್ ಬಾಲಕಿಯರ
ಕಾಲೇಜಿಗೆ ಹಾಜರಾಗುವಂತೆ ಎಲ್ಲಾ ಸಿ ಆರ್ ಪಿ ಗಳು ಹಾಗೂ ಎಲ್ಲಾ ಸಂಬಂದಿಸಿದ ಮುಖ್ಯ ಗುರುಗಳು ಕ್ರಮವಹಿಸಲು ಕೆಂಪಯ್ಯ ಅವರು ಸೂಚಿಸಿದ್ದಾರೆ.


*****

Leave a Reply

Your email address will not be published. Required fields are marked *